ಹೊಸಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಗ್ನಿಶಾಮಕ ಸೇವಾ ಸಪ್ತಾಹದ ಅಂಗವಾಗಿ ಅಗ್ನಿ ದುರಂತಗಳ ಮುಂಜಾಗ್ರತಾ ಕ್ರಮಗಳ ಕುರಿತು ನಾಗರಿಕರಿಗೆ ಅರಿವು ಮೂಡಿಸಲಾಯಿತು. ಅಗ್ನಿಶಾಮಕ ಅಧಿಕಾರಿ ಡಿ.ಯುವರಾಜ್, ಸಿಬ್ಬಂದಿಗಳಾದ ರವಿ, ಸಂತೋಷ, ವಿಜಯಕುಮಾರ್ ರೆಡ್ಡಿ, ಲಕ್ಷ್ಮಣ ನಾಯ್ಕ, ಶಿವಕುಮಾರ್ ಇತರರಿದ್ದರು .
ಹೊಸಪೇಟೆ: ಜಿಲ್ಲಾ ಅಗ್ನಿಶಾಮಕ ಮತ್ತು ತುರ್ತುಸೇವಾ ಇಲಾಖೆಯಿಂದ ವಿವಿಧೆಡೆ ಅಗ್ನಿಶಾಮಕ ಸೇವಾ ಸಪ್ತಾಹದ ಅಂಗವಾಗಿ ಅಗ್ನಿ ದುರಂತಗಳ ಬಗ್ಗೆ ಸುರಕ್ಷತಾ ಕ್ರಮ ಮತ್ತು ಅಗ್ನಿ ದುರಂತ ಸಂಭವಿಸಿದಾಗ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ನಾಗರಿಕರಿಗೆ ಅರಿವು ಮೂಡಿಸಲಾಯಿತು.
ಅಗ್ನಿಶಾಮಕ ಅಧಿಕಾರಿ ಡಿ.ಯುವರಾಜ್ ಮಾತನಾಡಿ, ಅಡುಗೆ ಅನಿಲ ಸಿಲಿಂಡರ್‌ಗಳ ನಿರ್ವಹಣೆ, ಅಗ್ನಿ ನಂದಕಗಳ ವಿಧಗಳು ಮತ್ತು ಉಪಯೋಗಿಸುವ ಕ್ರಮಗಳು ಬಗ್ಗೆ ನಗರದ ಚಿತ್ರಮಂದಿರಗಳು, ಪೆಟ್ರೋಲ್ ಬಂಕ್‌ಗಳಿಗೆ ಭೇಟಿ ನೀಡಿ ಕರಪತ್ರ ಹಂಚಲಾಗಿದೆ. ಇಲಾಖೆಯಿಂದ ತಿಳಿವಳಿಕೆ ನೀಡಲಾಗಿದೆ. ನಾಗರಿಕರು ಅಗ್ನಿ ಅನಾಹುತ ಸಂಭವಿಸಿದ ವೇಳೆ ಯಾವುದೇ ಆತಂಕಕ್ಕೆ ಒಳಗಾಗದೆ ಸಂಯಮದಿAದ ಇಲಾಖೆ ನೀಡಿರುವ ಸಲಹೆ ಪಾಲಿಸಬೇಕು ಎಂದು ತಿಳಿಸಿದರು.
ಕಳೆದ ಎರಡು ದಿನಗಳಿಂದ ಬಸ್ ನಿಲ್ದಾಣ, ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಇತರೆ ಕಡೆ ಸಾರ್ವಜನಿಕರನ್ನು ಒಂದೆಡೆ ಸೇರಿಸಿ ಬೆಂಕಿ ಅನಾಹುತ ಉಂಟಾದಾಗ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಉಪನ್ಯಾಸ ನೀಡಲಾಯಿತು. ಅಲ್ಲದೆ, ಅಣುಕು ಪ್ರದರ್ಶನದ ಮೂಲಕ ಜಲ ವಾಹನಗಳಿಂದ ಪ್ರಾತ್ಯಕ್ಷಿಕೆ ನೀಡಲಾಯಿತು. ನಾಗರಿಕರನ್ನು ಜಾಗೃತಗೊಳಿಸಲು ಮುದ್ರಿತ ಕರಪತ್ರ ವಿತರಿಸಲಾಯಿತು.