ಆರೋಗ್ಯದ ಬಗ್ಗೆ ಜಾಗೃತರಾಗಿರಿ

ಸಂಡೂರಿನಲ್ಲಿ ಉಚಿತ ಆರೋಗ್ಯ ಶಿಬಿರದಲ್ಲಿ ಶಾಸಕಿ ಅನ್ನಪೂರ್ಣ ತುಕಾರಾಮ್ ಭಾನುವಾರ ಮಾತನಾಡಿದರು. ರೋಟರಿ ಸಂಸ್ಥೆ ಅಧ್ಯಕ್ಷ ಪ್ರಕಾಶ್ ಜೈನ್, ಜೆ.ಎಂ. ಬಸವರಾಜ, ರಾಜೇಶ್ ಜೈನ್, ಆಶಾಲತಾ ಸೋಮಪ್ಪ ಇದ್ದರು.
ಸಂಡೂರಿನಲ್ಲಿ ಉಚಿತ ಆರೋಗ್ಯ ಶಿಬಿರದಲ್ಲಿ ಶಾಸಕಿ ಅನ್ನಪೂರ್ಣ ತುಕಾರಾಮ್ ಭಾನುವಾರ ಮಾತನಾಡಿದರು. ರೋಟರಿ ಸಂಸ್ಥೆ ಅಧ್ಯಕ್ಷ ಪ್ರಕಾಶ್ ಜೈನ್, ಜೆ.ಎಂ. ಬಸವರಾಜ, ರಾಜೇಶ್ ಜೈನ್, ಆಶಾಲತಾ ಸೋಮಪ್ಪ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಪ್ತಗಿರಿ
  • ಆಸ್ಪತ್ರೆ
  • ಸಹಯೋಗ
ಸಂಡೂರು: ಜನತೆ ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಮತ್ತು ಸಾರ್ವಜನಿಕರು ಉಚಿತ ಶಿಬಿರಗಳ ಪ್ರಯೋಜನ ಪಡೆಯಬೇಕು ಎಂದು ಶಾಸಕಿ ಅನ್ನಪೂರ್ಣ ತುಕಾರಾಮ್ ಹೇಳಿದರು.
ರೋಟರಿ ಬಾಲಭವನದಲ್ಲಿ ರೋಟರಿ ಕ್ಲಬ್, ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ಸಹಯೋಗದೊಂದಿಗೆ ಭಾನುವಾರ ಹೃದಯರೋಗ, ನರರೋಗ, ಮೂತ್ರಪಿಂಡದ ಕಲ್ಲು ಹಾಗೂ ಕ್ಯಾನ್ಸರ್ ಕಾಯಿಲೆಗಳ ಉಚಿತ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಸಂಸ್ಥೆಯು ಜನಪರ ಕಾಳಜಿ ಮೆರೆಯುತ್ತಿದೆ. ಪ್ರತಿವರ್ಷ ಒಂದಿಲ್ಲೊಂದು ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ರೋಟರಿ ಕ್ಲಬ್‌ನಿಂದ ಜನಪರ ಸೇವೆ ನಿರಂತರವಾಗಿದೆ ಎಂದರು. ತಜ್ಞರಾದ ಡಾ. ಸತೀಶ್, ಡಾ. ಸನು ಮಾಡಾಳ್, ಡಾ. ಸಾಯ್ನೇಶ್ ಹಾಗೂ ಡಾ. ಪೃಥ್ವೀಕ್ ತಪಾಸಣೆ ನಡೆಸಿದರು.
ರೋಟರಿ ಸಂಸ್ಥೆ ಅಧ್ಯಕ್ಷ ಪ್ರಕಾಶ್ ಜೈನ್, ಜೆ.ಎಂ. ಬಸವರಾಜ, ರಾಜೇಶ್ ಜೈನ್, ಆಶಾಲತಾ ಸೋಮಪ್ಪ, ಎಂ.ವಿ. ಹಿರೇಮಠ, ಎಚ್. ಈರಣ್ಣ, ಸುರೇಶ್ ಗೌಡ, ಕೆ. ನಾಗರಾಜ್, ರುದ್ರೇಶ್ ಶೆಟ್ಟಿ, ಎಚ್.ಎಂ. ಶಿವಮೂರ್ತಿ, ಡಿ. ಕೃಷ್ಣಪ್ಪ, ಸಿ. ಗೌರೀಶ್, ಕೆ. ಶಿವಪ್ಪ, ವಿಶ್ವನಾಥರೆಡ್ಡಿ ಹಾಗೂ ರಂಜಿತಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net