ಹೊಸಪೇಟೆ: ಆರ್ಥಿಕವಾಗಿ ಹಿಂದುಳಿದ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಕೇಂದ್ರ ಸರ್ಕಾರ ನಡೆಸುವ ಪ್ರತಿಷ್ಠಿತ 'ರಾಷ್ಟ್ರೀಯ ಸಾಧನ ಹಾಗೂ ಗುಣಗೌರವ ವಿದ್ಯಾರ್ಥಿವೇತನ' (ಎನ್ ಎಂಎAಎಸ್) ಪರೀಕ್ಷೆಯಲ್ಲಿ ಪಾಪಿನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ದ್ವಿಭಾಷಾ ಮಾಧ್ಯಮ ಶಾಲೆಯ (ಎ.ಕೆ.ಸಿ) 8ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಬಾನುಶ್ರೀ ಆಯ್ಕೆಯಾಗಿದ್ದಾಳೆ.
ದೇಶವನ್ನು ಸುತ್ತದೇ, ಕೋಶವನ್ನು ಓದಿ ಎಂಬ ಮಾತಿನಂತೆ, ಗ್ರಾಮೀಣ ಭಾಗದ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿದ ಬಾನುಶ್ರೀ ತನ್ನ ಕಠಿಣ ಪರಿಶ್ರಮದಿಂದ ಈ ಗಮನಾರ್ಹ ಯಶಸ್ಸು ಗಳಿಸುವ ಮೂಲಕ ಇತರ ಗ್ರಾಮೀಣ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ.