ಗ್ರಾಮದಲ್ಲೇ ದೊರೆಯಲಿದೆ ಬ್ಯಾಂಕಿಂಗ್ ಸೇವೆ

ಕೂಡ್ಲಿಗಿ ತಾಲೂಕಿನ ಗುಡೇಕೋಟೆಯಲ್ಲಿ ಬಿಡಿಸಿಸಿ ಬ್ಯಾಂಕ್ ಶಾಖೆ ಆರಂಭಿಸಲಾಯಿತು.
ಕೂಡ್ಲಿಗಿ ತಾಲೂಕಿನ ಗುಡೇಕೋಟೆಯಲ್ಲಿ ಬಿಡಿಸಿಸಿ ಬ್ಯಾಂಕ್ ಶಾಖೆ ಆರಂಭಿಸಲಾಯಿತು.
Published on
ಕೂಡ್ಲಿಗಿ: ಗ್ರಾಮೀಣ ಭಾಗದ ಜನರಿಗೆ ಬ್ಯಾಂಕಿಂಗ್ ಸೇವೆ ಸುಲಭವಾಗಿ ಲಭ್ಯವಾಗುವ ಉದ್ದೇಶದಿಂದ ಗುಡೇಕೋಟೆಯಲ್ಲಿ ಬಿಡಿಸಿಸಿ ಬ್ಯಾಂಕ್ ಆರಂಭಿಸಲಾಗಿದೆ. ಗ್ರಾಹಕರು ಬ್ಯಾಂಕಿನ ಸದುಪಯೋಗ ಪಡೆದುಕೊಳ್ಳುವಂತೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ಗುಡೇಕೋಟೆಯಲ್ಲಿ ಬಿಡಿಸಿಸಿ ಬ್ಯಾಂಕ್ ಶಾಖೆಗೆ ಚಾಲನೆ ನೀಡಿ ಸೋಮವಾರ ಮಾತನಾಡಿದರು. ರೈತರು, ಮಹಿಳೆಯರು ಮತ್ತು ಸಣ್ಣ ವ್ಯಾಪಾರಿಗಳಿಗೆ ಸಾಲ, ಉಳಿತಾಯ ಹಾಗೂ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು ಇನ್ನು ಮುಂದೆ ಗ್ರಾಮದಲ್ಲೇ ದೊರೆಯಲಿವೆ. ಇದರಿಂದಾಗಿ ಜನರು ಪಟ್ಟಣಕ್ಕೆ ಅಲೆದಾಡುವ ತೊಂದರೆ ತಪ್ಪುತ್ತದೆ ಎಂದು ಹೇಳಿದರು.
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡುಮುಣುಗು ಕೆ.ತಿಪ್ಪೇಸ್ವಾಮಿ ಮಾತನಾಡಿ. ಜಿಲ್ಲೆಯ ರೈತರು, ಸರ್ಕಾರಿ ನೌಕರರು ಹಾಗೂ ವ್ಯಾಪಾರಿಗಳ ವಿಶ್ವಾಸರ್ಹ ಬ್ಯಾಂಕ್ ಎಂಬ ಕೀರ್ತಿಗೆ ಬಿಡಿಸಿಸಿ ಬ್ಯಾಂಕ್ ಭಾಜನವಾಗಿದೆ. ಗ್ರಾಹಕರಿಗೆ ಸುಲಭವಾಗಿ ಸೇವೆ ದೊರೆಯುವುದರೊಂದಿಗೆ ನಂಬಿಕೆಯ ಬ್ಯಾಂಕ್ ಆಗಿದೆ. ಜಿಲ್ಲೆಯಲ್ಲಿ 33 ಶಾಖೆಗಳಿದ್ದು, 14 ಶಾಖೆಗಳ ಆರಂಭಕ್ಕೆ ಆರ್‌ಬಿಐ ಅನುಮತಿ ನೀಡಿದೆ. ಗುಡೇಕೋಟೆಯಲ್ಲಿ ಬಿಡಿಸಿಸಿ ಬ್ಯಾಂಕ್‌ನ 35 ನೇ ಶಾಖೆ ಆರಂಭಿಸಲಾಗಿದೆ. ಸ್ಥಳೀಯ ಜನರು ಕೂಡ್ಲಿಗಿ ಶಾಖೆಗೆ ಹೋಗಿ ವ್ಯವಹರಿಸುವುದು ಕಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಸುಸಜ್ಜಿತ ಬ್ಯಾಂಕ್ ಆರಂಭಿಸಲಾಗಿದೆ. ಆರು ಕೃಷಿ ಪತ್ತಿನ ಸಹಕಾರಿ ಸಂಘಗಳು ಈ ಬ್ಯಾಂಕಿನ ವ್ಯಾಪ್ತಿಗೆ ಒಳಪಡಲಿದ್ದು, ಕಾರ್ಮಿಕರು, ರೈತರು ಸೇರಿದಂತೆ ಸ್ಥಳೀಯ ಜನರಿಗೆ ಬ್ಯಾಂಕ್ ವರದಾನವಾಗಲಿದೆ ಎಂದು ತಿಳಿಸಿದರು.
ನೂತನ ಶಾಖೆಯಲ್ಲಿ ಎಟಿಎಂ, ಸಾಲ ಸೌಲಭ್ಯ, ಜನಧನ್ ಖಾತೆ, ಸರ್ಕಾರಿ ಯೋಜನೆಗಳ ಹಣ ವರ್ಗಾವಣೆ ಸೇವೆಗಳು, ಕೃಷಿ ಸಾಲ, ವಾಹನ ಸಾಲ, ಮನೆ ನಿರ್ಮಾಣಕ್ಕೆ ಸಾಲ ಸೌಲಭ್ಯ ಲಭ್ಯವಿರುತ್ತವೆ. ಬ್ಯಾಂಕ್ ತೆರೆಯುವುದರಿಂದ ಸ್ಥಳೀಯರಿಗೆ ಉದ್ಯೋಗ ಅವಕಾಶವೂ ಸೃಷ್ಟಿಯಾಗಲಿದೆ ಎಂದು ತಿಳಿಸಿದರು.
ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ದಾರುಕೇಶ್, ನಿರ್ದೇಶಕರಾದ, ಶಾಸಕಿ ಲತಾ ಮಲ್ಲಿಕಾರ್ಜುನ, ಮಾಜಿ ಶಾಸಕ ಟಿ.ಎಂ. ಚಂದ್ರಶೇಖರಯ್ಯ, ಚೊಕ್ಕಬಸವನಗೌಡ, ಅಯ್ಯಗೋಳ್ ಚಿದಾನಂದ, ವಿಜಯಕುಮಾರ್, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಮೂಕಯ್ಯ ಸ್ವಾಮಿ, ಹುಲುಗಪ್ಪ, ಬಳ್ಳಾರಿ ನವೀನ್ ರೆಡ್ಡಿ, ಬ್ಯಾಂಕ್ ಸಿಇಒ ಜಯಪ್ರಕಾಶ್, ಉಪ ಪ್ರಧಾನ ವ್ಯವಸ್ಥಾಪಕರಾದ ಶಂಕರ್, ಮರಿಸ್ವಾಮಿ, ಕ್ಷೇತ್ರಾಧಿಕಾರಿಗಳಾದ ಕನಕಪ್ಪ, ಕೊಟ್ರೇಶ್, ಗ್ರಾಮದ ಪ್ರಮುಖರಾದ ರಾಜಣ್ಣ, ರಾಘವೇಂದ್ರ ಸ್ವಾಮಿ, ಬಷೀರ್, ಎನ್.ಪಿ.ಮಂಜುನಾಥ, ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣ, ಗೋವಿಂದ, ದಿನ್ನೆ ಮಲ್ಲಿಕಾರ್ಜುನ, ಪ್ರಾಣೇಶ್, ತಿಪ್ಪೇಸ್ವಾಮಿ, ಎರಿಸ್ವಾಮಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net