ಅಯ್ಯಪ್ಪಸ್ವಾಮಿ ಮಂಡಲ ಪೂಜೆ ಸಂಪನ್ನ

ಕಮಲಾಪುರದ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಗುರುಸ್ವಾಮಿ ಶ್ರೀನಿವಾಸ್, ಪ್ರಮುಖರಾದ ಭದ್ರಾಸ್ವಾಮಿ, ಬಳೆಗಾರ ಪಂಪಯ್ಯ, ಬಳೆಗಾರ ಶ್ರೀನಿವಾಸ್ ಇತರರಿದ್ದರು.
ಕಮಲಾಪುರದ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಗುರುಸ್ವಾಮಿ ಶ್ರೀನಿವಾಸ್, ಪ್ರಮುಖರಾದ ಭದ್ರಾಸ್ವಾಮಿ, ಬಳೆಗಾರ ಪಂಪಯ್ಯ, ಬಳೆಗಾರ ಶ್ರೀನಿವಾಸ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಭಕ್ತಿಯಿಂದ ನೆರವೇರಿದ ಪೂಜಾ ವಿಶೇಷ ಕಾರ್ಯಕ್ರಮ
ಹೊಸಪೇಟೆ: ತಾಲೂಕಿನ ಕಮಲಾಪುರದ ಶ್ರೀ ಅಯಪ್ಪ ಸ್ವಾಮಿ ದೇಗುಲದಲ್ಲಿ ಶುಕ್ರವಾರ ಮಂಡಲ ಪೂಜಾ ವಿಶೇಷ ಕಾರ್ಯಕ್ರಮ ಭಕ್ತಿಯಿಂದ ನೆರವೇರಿದವು.
ಮಂಡಲ ಪೂಜಾ ವಿಶೇಷ ಕಾರ್ಯಕ್ರಮದ ಪ್ರಯುಕ್ತ ದೇಗುಲದ ಶ್ರೀ ಅಯ್ಯಪ್ಪ ಸ್ವಾಮಿ ಮೂರ್ತಿಗೆ ಅಷ್ಟಾಭಿಷೇಕ, ವಿಶೇಷ ಅಲಂಕಾರ ಗೈದು ಪೂಜೆ ಜರುಗಿದವು. ಪ್ರಧಾನ ಆರ್ಚಕ ಗಣೇಶ್ ಸ್ವಾಮಿ ಅವರು ವಿಶೇಷ ಪೂಜೆವನ್ನು ನೆರವೇರಿಸಿದರು. ನಂತರ ನವಗ್ರಹ, ದುರ್ಗಾ, ಸುದರ್ಶನ ಹೋಮ, ಕ್ಷೀಪ್ರ ಕಾರ್ಯಸಿದ್ಧರ್ಥ ಗಣಪತಿ ಹೋಮ ನಡೆದವು.
ಅಯ್ಯಪ್ಪ ಮಾಲಾಧಾರಿಗಳು ಸೇರಿದಂತೆ ಸಹಸ್ರಾರು ಭಕ್ತರು, ಬೆಳಿಗ್ಗೆಯಿಂದ ಅಯ್ಯಪ್ಪ ದೇಗುಲಕ್ಕೆ ಆಗಮಿಸಿ, ದೇವರ ದರ್ಶನ ಪಡೆದರು. ಹೂ-ಹಣ್ಣು, ಕಾಣಿಕೆ ಸಲ್ಲಿಸಿ ಭಕ್ತಿ ಮೆರೆದರು. ಬಳಿಕ ನಡೆದ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಭಕ್ತರು ಪ್ರಸಾದ ಸ್ವೀಕಾರ ಮಾಡಿದರು.
ಮಂಡಲ ಪೂಜಾ ವಿಶೇಷ ಕಾರ್ಯಕ್ರಮದ ಪ್ರಯುಕ್ತ ಶ್ರೀ ಗಣಪತಿ, ಶ್ರೀ ಅಯ್ಯಪ್ಪ ಸ್ವಾಮಿ, ಶ್ರೀ ಮುರುಗನ್ ದೇವರ ಪೋಟೋವನ್ನು ನಗರದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಯಿತು. ದಾರಿಯುದಕ್ಕೂ ಅಯ್ಯಪ್ಪ ಮಾಲಾಧಾರಿಗಳು, ಭಕ್ತರು ಅಯ್ಯಪ್ಪ ಸ್ವಾಮಿ ಭಜನೆ ಗೀತೆಗಳನ್ನು ಹಾಡಿ ಹೆಜ್ಜೆ ಹಾಕಿದರು.
ಶ್ರೀ ಅಯಪ್ಪ ಸ್ವಾಮಿ ಸೇವಾ ಸಮಿತಿಯಿಂದ ಪಟ್ಟಣದ ಗಾರೆಬಾವಿ ಆಂಜನೇಯ ದೇಗುಲದಿಂದ ಹಿರೆಕೇರಿ, ತಿಮ್ಮನಾಥಕೇರಿ, ಮನ್ಮಥಕೇರಿ, ಚೌಡಿಕೇರಿ, ಶ್ರೀ ಕೃಷ್ಣದೇವರಾಯ ವೃತ್ತ, ಊರಮ್ಮ ದೇಗುಲ, ಗೋನಾಳಕೇರಿ, ವಾಲ್ಮೀಕಿ ವೃತ್ತ, ಮಾರೆಯಮ್ಮ ದೇವಿ ದೇಗುಲ, ಕನ್ನಡ ವಿವಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳ ಮೂಲಕ ಅಯ್ಯಪ್ಪ ದೇಗುಲದಲ್ಲಿ ಸಂಪನ್ನಗೊAಡಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net