ಕನಿಷ್ಠ 10 ಸಾವಿರ ರೂ. ಮಾಸಾಶನ ನೀಡಲಿ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹೂವಿನಹಡಗಲಿಯಲ್ಲಿ ಅಂಗವಿಕಲರ ಮತ್ತು ಪಾಲಕರ ಒಕ್ಕೂಟದಿಂದ ಶುಕ್ರವಾರ ಪ್ರತಿಭಟನೆ ನಡೆಯಿತು,
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹೂವಿನಹಡಗಲಿಯಲ್ಲಿ ಅಂಗವಿಕಲರ ಮತ್ತು ಪಾಲಕರ ಒಕ್ಕೂಟದಿಂದ ಶುಕ್ರವಾರ ಪ್ರತಿಭಟನೆ ನಡೆಯಿತು,
Published on
ಹೂವಿನಹಡಗಲಿ: ಅಂಗವಿಕಲರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪಟ್ಟಣದ ಶಾಸ್ತ್ರಿ ವೃತ್ತದಲ್ಲಿ ಅಂಗವಿಕಲರ ಮತ್ತು ಪಾಲಕರ ಒಕ್ಕೂಟದಿಂದ ಶುಕ್ರವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಕೆ.ಎಂ.ಗುರುಬಸವರಾಜಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ಪ್ರಧಾನ ಕಾರ್ಯದರ್ಶಿ ರಂಗಪ್ಪ ದಾಸರ ಮಾತನಾಡಿ, ರಾಜ್ಯದಲ್ಲಿ ಅಂಗವಿಕಲರಿಗೆ ಮೀಸಲಾತಿ ಇದ್ದೂ ಇಲ್ಲದಂತಾಗಿದೆ. ಸರ್ಕಾರ ಅಂಗವಿಕಲರಿಗೆ ಉದ್ಯೋಗ ನೀಡಿದ್ದರೆ ನಾವು ಮಾಸಾಶನ ಕೇಳುತ್ತಿರಲಿಲ್ಲ. ಪ್ರಸ್ತುತ ದಿನಮಾನಗಳಲ್ಲಿ ಜೀವನ ನಡೆಸುವುದು ಬಹಳ ಕಷ್ಟಕವಾಗಿದ್ದು, ಕನಿಷ್ಠ 10 ಸಾವಿರ ರೂ. ಮಾಸಾಶನ ನೀಡಬೇಕು ಎಂದು ಆಗ್ರಹಿಸಿದರು.
ಅಂಗವಿಕಲರಿಗೆ ಆದಾಯವೇ ಇಲ್ಲ. ಇದರಿಂದಾಗಿ ಸರ್ಕಾರ, ಪಾಲಕರು ಹಾಗೂ ಸಾರ್ವಜನಿಕರಿಂದ ನಾವು ಅಸ್ಪಶ್ಯತೆ ಅನುಭವಿಸುತ್ತಿದ್ದು, ಆದಾಯ ಮಿತಿ ನಿಗದಿಪಡಿಸಿ ಸೌಲಭ್ಯದಿಂದ ನಮ್ಮನ್ನು ದೂರ ಸರಿಸುತ್ತಿರುವುದು ಸರಿಯಲ್ಲ. ಸರ್ಕಾರ ಕೂಡಲೇ ಈ ನೀತಿಯನ್ನು ಹಿಂದೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಒಕ್ಕೂಟದ ತಾಲೂಕು ಅಧ್ಯಕ್ಷ ಎಸ್.ಚಂದ್ರಪ್ಪ ಮಾತನಾಡಿ, ತಾಲೂಕಿನಲ್ಲಿ 5490 ಜನ ಫಲಾನುಭವಿಗಳ ಮಾಸಾಶನವನ್ನು ರದ್ಧು ಪಡಿಸಲಾಗಿದೆ. ಅವರ ಬದುಕನ್ನು ಸರ್ಕಾರ ಬೀದಿಗೆ ತಂದಿದೆ ಎಂದು ದೂರಿದರು. ತಾಲೂಕು ಉಪಾಧ್ಯಕ್ಷ ನಿಂಗಪ್ಪ ಜಾಡರ, ನಗರ ಘಟಕದ ಅಧ್ಯಕ್ಷ ಎನ್.ಎಂ.ಕೊಟ್ರೇಶ್, ಉಪಾಧ್ಯಕ್ಷ ದಾದಾ ಖಲಂದರ್, ಪ್ರಮುಖರಾದ ಕೃಷ್ಣನಾಯ್ಕ, ಸೋಮಪ್ಪ, ಜಗದೀಶ, ರಾಘವೇಂದ್ರ, ಹಾಲೇಶ್, ಕುರುವಪ್ಪ, ಶಿವಪ್ಪ, ಜಯಪ್ಪ, ಬಸವರಾಜ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net