ತುಂಗಭದ್ರಾ ಜಲಾಶಯದಲ್ಲಿ ಕ್ರಸ್ಟ್ ಗೇಟ್ ಅಳವಡಿಕೆಗೆ ಎಸ್ ಇ ನಾರಾಯಣನಾಯ್ಕ ನೇತೃತ್ವದಲ್ಲಿ ಪೂಜಾಕಾರ್ಯ ನಡೆಯಿತು. ಕಾರ್ಯದರ್ಶಿ ಒ.ಆರ್.ಕೆ.ರೆಡ್ಡಿ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಪಂ ಸಿಇಒ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಶಾ, ಎಸ್ಪಿ ಎಸ್.ಜಾಹ್ನವಿ ಇತರರಿದ್ದರು.
ಹೊಸಪೇಟೆ : ತುಂಗಭದ್ರಾ ಜಲಾಶಯದ ಹೊಸ ಕ್ರಸ್ಟ್ ಗೇಟ್ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಅಳವಡಿಕೆಗೆ ಪೂಜೆ ನೆರವೇರಿಸುವ ಮೂಲಕ ಟಿಬಿಬಿ ಕೆಲಸ ಆರಂಭಿಸಿದೆ.
ಕಳೆದ ಒಂದೂವರೆ ವರ್ಷದ ನಂತರ ಗೇಟ್ ಅಳವಡಿಕೆಗೆ ಗುಜರಾತ್ ಅಹಮದಾಬಾದ್ ಮೂಲದ ಹಾರ್ಡ್‌ವೇರ್ ಟೂಲ್ಸ್ ಆ್ಯಂಡ್ ಮೆಷಿನರಿ ಪ್ರೊಜೆಕ್ಟ್ ಕಂಪನಿ ಕೆಲಸ ಆರಂಭ ಮಾಡಲು ಎಲ್ಲ ಸಿದ್ದತೆನಡೆಸಿದೆ. ಎಸ್ ಇ ನಾರಾಯಣನಾಯ್ಕ ನೇತೃತ್ವದಲ್ಲಿ ಪೂಜಾಕಾರ್ಯ ನಡೆಯಿತು.
ಕಾರ್ಯದರ್ಶಿ ಒ.ಆರ್.ಕೆ.ರೆಡ್ಡಿ ಮಾತನಾಡಿ, ಅಂದಾಜು 52 ಕೋಟಿ ವೆಚ್ಚದಲ್ಲಿ 33 ಕ್ರೆಸ್ಟ್‌ಗೇಟ್‌ಗಳನ್ನು ತೆರವುಗೊಳಿಸಿ, ಹೊಸ ಗೇಟ್‌ಗಳನ್ನು ಅಳವಡಿಸುವ ಕಾರ್ಯಕ್ಕೆ ಇಂದು ಪೂಜೆ ನೆರವೇರಿಸಲಾಗಿದೆ. ತಿಂಗಳಿಗೆ 8 ಗೇಟ್ ಅಳವಡಿಕೆಗೆ ಗುತ್ತಿಗೆ ಕಂಪನಿ ಗುರಿ ಹೊಂದಿದೆ. 5 ತಂಡಗಳು ಕಾರ್ಯ ನಿರ್ವಹಿಸಲಿವೆ. ಮುಂದಿನ ಏಪ್ರಿಲ್ ತಿಂಗಳಿಗೆಲ್ಲ ಗೇಟ್ ಅಳವಡಿಕೆಗೆ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ. ಇದೇ ತಿಂಗಳು 20 ರಂದು 18ನೇ ಗೇಟ್ ತೆರೆವು ಕಾರ್ಯ ನಡರಯಲಿದೆ. ನಂತರ ಪ್ರಯೋಗಿಕ ಗೇಟ್ ಅಳವಡಿಕೆಗೆ ನಡೆಯಲಿದೆ. ಯಶಸ್ಸು ಕಂಡ ನಂತರ ಸರಳವಾಗಿ ಎಲ್ಲ ಗೇಟ್ ಅಳವಡಿಕೆಗೆ ಅನುಕೂಲ ಆಗಲಿದೆ ಎಂದರು.
ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಪಂ ಸಿಇಒ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಶಾ, ಎಸ್ಪಿ ಎಸ್.ಜಾಹ್ನವಿ, ಎಸ್ ಇ ಚಂದ್ರಶೇಖರ್, ನೀರಾವರಿ ಇಲಾಖೆ ಎಸ್ ಇ ಶ್ರೀನಿವಾಸ್ ಮಲ್ಲಿಗೇವಾಡ್, ಎಸ್ ಡಿಒ ಜ್ಞಾನೇಶ್ವರ, ಎಇಇ ರಾಘವೇಂದ್ರ, ಎಸ್ ಒ ಕಿರಣ್ ಇತರರಿದ್ದರು