ಸಂಸ್ಕರಣೆ-ಮೌಲ್ಯವರ್ಧನೆ ಕಾರ್ಯಕ್ಕೆ ಮೆಚ್ಚುಗೆ

ಕೂಡ್ಲಿಗಿ ತಾಲೂಕಿನ ಕಸಾಪುರ ಬಳಿಯಿರುವ ಹುಣಸೆಹಣ್ಣು ಹಾಗೂ ಶೇಂಗಾ ಸಂಸ್ಕರಣಾ ಘಟಕದ ಕಾರ್ಯವಿಧಾನವನ್ನು  ವಿಶ್ವ ಬ್ಯಾಂಕ್ ಪ್ರಾದೇಶಿಕ ಉಪಾಧ್ಯಕ್ಷ ಜೋನಾಸ್ ಜಟ್ ನೇತೃತ್ವದ ತಂಡ ಪರಿಶೀಲಿಸಿತು.
ಕೂಡ್ಲಿಗಿ ತಾಲೂಕಿನ ಕಸಾಪುರ ಬಳಿಯಿರುವ ಹುಣಸೆಹಣ್ಣು ಹಾಗೂ ಶೇಂಗಾ ಸಂಸ್ಕರಣಾ ಘಟಕದ ಕಾರ್ಯವಿಧಾನವನ್ನು ವಿಶ್ವ ಬ್ಯಾಂಕ್ ಪ್ರಾದೇಶಿಕ ಉಪಾಧ್ಯಕ್ಷ ಜೋನಾಸ್ ಜಟ್ ನೇತೃತ್ವದ ತಂಡ ಪರಿಶೀಲಿಸಿತು.
Published on
ಕೂಡ್ಲಿಗಿ: ಗುಡೇಕೋಟೆ ಹೋಬಳಿ ಕಸಾಪುರ ಬಳಿಯಿರುವ ಹುಣಸೆಹಣ್ಣು ಹಾಗೂ ಶೇಂಗಾ ಸಂಸ್ಕರಣಾ ಘಟಕಕ್ಕೆ ಸೋಮವಾರ ವಿಶ್ವ ಬ್ಯಾಂಕ್ ತಂಡ ಭೇಟಿ ನೀಡಿ ಪರಿಶೀಲಿಸಿತು.
ಗುಡೇಕೋಟೆಯ ರೈತ ಉತ್ಪಾದಕರ ಸಂಘದಿಂದ ನಡೆಸಲಾಗುತ್ತಿರುವ ಈ ಘಟಕದಲ್ಲಿ ಹುಣಸೆ ಹಣ್ಣಿನ ಸಂಸ್ಕರಣೆ, ಶೇಂಗಾ ಬೀಜದ ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ ಬಗ್ಗೆ ಮಾಹಿತಿ ಪಡೆದುಕೊಂಡ ತಂಡ ಮೆಚ್ಚುಗೆ ವ್ಯಕ್ತಪಡಿಸಿತು.
ವಿಶ್ವ ಬ್ಯಾಂಕ್ ಪ್ರಾದೇಶಿಕ ಉಪಾಧ್ಯಕ್ಷ ಜೋನಾಸ್ ಜಟ್, ನೋರಾ ಕೌಸ್, ಅಮಿತ್ ಆರೋರ, ಕುಲರಂಜನ್ ಕುಜರ್, ಗುಡೇಕೋಟೆ ರೈತ ಉತ್ಪಾದಕರ ಕಂಪನಿ ಅಧ್ಯಕ್ಷ ಮಲ್ಲಯ್ಯ, ನಿರ್ದೇಶಕರಾದ ದಿನ್ನೆ ವಿರೂಪಾಕ್ಷಿ, ಶ್ರೀನಿವಾಸ್ ರಾಜು, ಅಲಮೇಲಮ್ಮ, ಹುಲಿರಾಜ, ಮಹಾದೇವಪ್ಪ, ಶಿವಪ್ರಸಾದಗೌಡ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ತೇಜಾವರ್ಧನ್, ಕೃಷಿ ಅಧಿಕಾರಿ ಪುಷ್ಪಾ ಅಳ್ನಾವರ್, ಗ್ರಾಮ ಆಡಳಿತಾಧಿಕಾರಿ ವೀರೇಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net