ಹರಪನಹಳ್ಳಿ: ಸಾಂಕ್ರಾಮಿಕ ಕಾಯಿಲೆಗಳು ಬಾಧಿಸದಿರಲಿ, ಮಳೆ-ಬೆಳೆ ಸಮೃದ್ಧಿಯಾಗಿ ಆಗಲಿ ಮತ್ತು ಊರಿನ ಒಳಿತಿಗಾಗಿ ಪ್ರಾರ್ಥಿಸಿ ಶುಕ್ರವಾರ ನಗರದಲ್ಲಿ ಅಜ್ಜಿ ಹಬ್ಬ ಆಚರಿಸಲಾಯಿತು.
ವಾಲ್ಮೀಕಿ ನಗರ, ಸೊಂಡೂರುಗೇರಿ ಮತ್ತು ಕುರುಬಗೇರಿ ಜನತೆ ಹಬ್ಬದಲ್ಲಿ ಪಾಲ್ಗೊಂಡಿದ್ದರು. ಮಡಿಯಿಂದ ಹೋಳಿಗೆ ತಯಾರಿಸಿ, ಅರಿಶಿನ, ಕುಂಕುಮ, ಬೇವಿನಸೊಪ್ಪು, ತೆಂಗಿನಕಾಯಿಯೊಂದಿಗೆ ಬಟ್ಟೆಯಲ್ಲಿ ಸುತ್ತಿಕೊಂಡು ನಿಗದಿತ ಸ್ಥಳದಲ್ಲಿಟ್ಟು ಪ್ರಾರ್ಥಿಸಲಾಯಿತು.