ಮಕ್ಕಳ ಬಗ್ಗೆ ಪಾಲಕರು ನಿಗಾವಹಿಸಲಿವೈಎಸ್ಪಿ

 ಹಿರಿಯ ನಾಗರಿಕರು
ಹಿರಿಯ ನಾಗರಿಕರು
Published on

ಪ್ರಮುಖ ಮುಖ್ಯಾಂಶಗಳು

  • ಐಪಿಎಲ್
  • ಬೆಟ್ಟಿಂಗ್
  • ಡ್ರಗ್ಸ್,
ಹರಪನಹಳ್ಳಿ: ಯುವ ಪೀಳಿಗೆ ಮೊಬೈಲ್ ದಾಸರಾಗದೆ ಓದಿನ ಕಡೆಗೆ ಹೆಚ್ಚು ಗಮನಹರಿಸಬೇಕು ಎಂದು ಡಿವೈಎಸ್ಪಿ ಸಂತೋಷ್ ಚವ್ಹಾಣ್ ತಿಳಿಸಿದರು.
ಸೀಕೆರೆ ಗ್ರಾಮದಲ್ಲಿ ದಲಿತರು, ಹಿರಿಯ ನಾಗರಿಕರು ಹಾಗೂ ಬಕ್ರೀದ್ ಶಾಂತಿ ಸಭೆಯಲ್ಲಿ ಸೋಮವಾರ ಮಾತನಾಡಿದರು. ಆನ್‌ಲೈನ್‌ನಲ್ಲಿರುವ ಅಪಾಯಕಾರಿ ಗೇಮ್ಸ್, ಐಪಿಎಲ್ ಬೆಟ್ಟಿಂಗ್, ಡ್ರಗ್ಸ್, ಮದ್ಯವ್ಯಸನಗಳ ದಾಸರಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ದುಶ್ಚಟಗಳಿಂದ ದೂರವಿದ್ದು, ಶಿಕ್ಷಣದ ಕಡೆಗೆ ಹೆಚ್ಚಿನ ಗಮನ ಹರಿಸಿ ಯಶಸ್ಸು ಸಾಧಿಸಬೇಕು.
ಮಕ್ಕಳ ಬಗ್ಗೆ ಪಾಲಕರು ನಿಗಾ ಇಡಬೇಕು. ಇತ್ತೀಚೆಗೆ ಸೈಬರ್ ಕ್ರೈಂ ದಿನೇ ದಿನೇ ಹೆಚ್ಚುತ್ತಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ನೋಟಿಫಿಕೇಶನ್‌ಗಳನ್ನು ಯಾರೂ ತೆರೆಯಬಾರದು ಎಂದು ತಿಳಿಸಿದರು.
ಪಿಎಸ್‌ಐ ವಿಜಯಕೃಷ್ಣ ಮಾತನಾಡಿ, ಪೊಲೀಸ್ ಇಲಾಖೆಯ ಕೆಎಸ್‌ಪಿ ಅಪ್ಲಿಕೇಶನ್ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಂಡು. ಇಲಾಖೆಯ ಸಲಹೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net