1956ರಲ್ಲಿ ಸ್ಥಾಪನೆಗೊಂಡಿದ್ದ ಮುಕ್ಕಣ್ಣ ಶಾಲೆಯೆಂದು ಪ್ರಸಿದ್ಧಿಗೊಂಡ 8ನೇವಾರ್ಡ್ ಸಹಿಪ್ರಾ ಶಾಲೆಯಲ್ಲಿಯೂ ಮಕ್ಕಳ ದಾಖಲಾತಿ ಕುಸಿಯುತ್ತಿದೆ. ಸದ್ಯ ಒಂದನೇ ತರಗತಿಗೆ ಮಕ್ಕಳು ದಾಖಲಾಗಿಲ್ಲ. ಎರಡನೇ ತರಗತಿಯಲ್ಲಿ ಮೂವರು, ಮೂರನೇ ತರಗತಿಯಲ್ಲಿ ನಾಲ್ವರು, ನಾಲ್ಕನೇ ತರಗತಿಯಲ್ಲಿ ಐದು, ಐದನೇ ತರಗತಿಯಲ್ಲಿ ಆರು, ಆರನೇ ತರಗತಿಯಲ್ಲಿ ಐದು, ಏಳನೇ ತರಗತಿಯಲ್ಲಿ ಒಂಬತ್ತು ಮಕ್ಕಳು ಸೇರಿ 32ಮಕ್ಕಳು ದಾಖಲಾಗಿದ್ದಾರೆ. ಕಳೆದ ವರ್ಷ 36ಮಕ್ಕಳು ದಾಖಲಾಗಿದ್ದರು. ಪಾಲಕರ ಸಭೆ ನಡೆಸಿ, ಪ್ರಭಾತ್‌ಪೇರಿ ಮಾಡಿ, ಮನೆಮನೆಗೆ ಭೇಟಿ ನೀಡಿ, ದಾಖಲಾತಿ ಆಂದೋಲನ ಮಾಡಿದರೂ ಮಕ್ಕಳ ದಾಖಲಾತಿಯಾಗಿಲ್ಲ. ಸದ್ಯ 5ವರ್ಷ5ತಿಂಗಳಿಂದ 5ವರ್ಷ 10ತಿಂಗಳೊಳಗಿನ 3ಮಕ್ಕಳಿದ್ದು ದಾಖಲಾತಿ ಸಮಸ್ಯೆಯಾಗಿದೆ. ಈ ಶಾಲೆಯ ವ್ಯಾಪ್ತಿಯ ಅಂಗನವಾಡಿ ಮಕ್ಕಳಿಲ್ಲ ಎಂದು ಮುಖ್ಯ ಶಿಕ್ಷಕ ಖಲೀಲ್ ಅಲವತ್ತುಕೊಂಡರು.