ಪ್ರೊ.ಕೆ.ಎಸ್.ಭಗವಾನ್ ವಿರುದ್ಧ ಕ್ರಮವಾಗಲಿ

ಶ್ರೀರಾಮನ ಕುರಿತು ನಿಂದನೆ ಮಾಡಿರುವ ಪ್ರೊ.ಕೆ.ಎಸ್.ಭಗವಾನ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಹರಪನಹಳ್ಳಿಯಲ್ಲಿ ತಹಸೀಲ್ದಾರ್ ಬಿ.ವಿ.ಗಿರೀಶ್‌ಬಾಬುಗೆ ತಾಲೂಕು ಹಿಂದೂ ಜನಜಾಗೃತಿ ಸಮಿತಿಯಿಂದ ಮನವಿ ಸಲ್ಲಿಸಲಾಯಿತು.
ಶ್ರೀರಾಮನ ಕುರಿತು ನಿಂದನೆ ಮಾಡಿರುವ ಪ್ರೊ.ಕೆ.ಎಸ್.ಭಗವಾನ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಹರಪನಹಳ್ಳಿಯಲ್ಲಿ ತಹಸೀಲ್ದಾರ್ ಬಿ.ವಿ.ಗಿರೀಶ್‌ಬಾಬುಗೆ ತಾಲೂಕು ಹಿಂದೂ ಜನಜಾಗೃತಿ ಸಮಿತಿಯಿಂದ ಮನವಿ ಸಲ್ಲಿಸಲಾಯಿತು.
Published on
ಹರಪನಹಳ್ಳಿ: ಶ್ರೀರಾಮನ ಕುರಿತು ಆಧಾರ ರಹಿತವಾಗಿ ನಿಂದನೆ ಮಾಡಿರುವ ಪ್ರೊ.ಕೆ.ಎಸ್.ಭಗವಾನ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ತಹಸೀಲ್ದಾರ್ ಬಿ.ವಿ.ಗಿರೀಶ್ ಬಾಬುಗೆ ತಾಲೂಕು ಹಿಂದೂ ಜನಜಾಗೃತಿ ಸಮಿತಿಯಿಂದ ಸೋಮವಾರ ಮನವಿ ಸಲ್ಲಿಸಲಾಯಿತು.
ಹರಿಹರದಲ್ಲಿ ಇತ್ತೀಚಿಗೆ ಡಿಎಸ್‌ಎಸ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ.ಕೆ.ಎಸ್.ಭಗವಾನ್, ಶ್ರೀರಾಮನ ಕುರಿತು ಅವಹೇಳನ ಮಾಡಿದ್ದಾರೆ. ಈ ಮೂಲಕ ಹಿಂದೂಗಳು ಹಾಗೂ ಹಿಂದೂ ಧರ್ಮಕ್ಕೆ ಅವಮಾನವೆಸಗಿದ್ದಾರೆ. ಇಂತಹ ದುರ್ವರ್ತನೆಯಿಂದ ಸಮಾಜದಲ್ಲಿ ಕೋಮು-ಗಲಭೆಗೆ ಮುನ್ನುಡಿ ಬರೆದಂತಾಗುತ್ತದೆ. ಭಗವಾನ್ ಅವರು ಈ ಹಿಂದಿನಂತೆ ಪದೇ ಪದೆ ಹಿಂದೂಗಳ ಭಾವನೆಗಳೊಂದಿಗೆ ಚೆಲ್ಲಾಟ ಆಡುವುದನ್ನು ರೂಢಿಯನ್ನಾಗಿಸಿಕೊಂಡಂತಿದೆ. ಕೆ.ಎಸ್.ಭಗವಾನ್ ಅವರ ವಿಕೃತ ಮನಸ್ಸಿಗೆ ಕಡಿವಾಣ ಹೇರಲು ಕಠಿಣ ಶಿಕ್ಷೆ ನೀಡಬೇಕೆಂದು ಮನವಿ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net