ಹಳ್ಳಿಗಳ ಸಬ್ ಏಜೆನ್ಸಿಗಳಿಗೆ ಸಿಲಿಂಡರ್ ವಿತರಿಸಿ ಗ್ರಾಮೀಣ ಭಾಗದ ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಹೆಚ್ಚಿನ ಹಣ ವಸೂಲಾತಿ, ಸಿಲಿಂಡರ್ ಅಭಾವ ಉಂಟು ಮಾಡುವ ಪ್ರಯತ್ನ ನಡೆಸಿದರೆ ಏಜೆನ್ಸಿ ಮಾಲೀಕರು, ವಿತರಕರನ್ನು ನೇರ ಹೊಣೆಯಾಗಿಸಿ ಎಲ್‌ಪಿಜಿ ಆದೇಶ 2000ರ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.