ಅಪಘಾತ ಐವರಿಗೆ ಗಾಯ

ಅಪಘಾತ ಐವರಿಗೆ ಗಾಯ
ಅಪಘಾತ ಐವರಿಗೆ ಗಾಯ
Published on
ಹೊಸಪೇಟೆ: ಲಾರಿ ಟ್ರಾಕ್ಟರ್ ನಡುವೆ ಅಪಘಾತವಾಗಿ ಐವರಿಗೆ ತೀವ್ರ ಗಾಯ ಆಗಿರುವ ಘಟನೆ ತಾಲೂಕಿನ ತಿಮ್ಮಲಾಪುರ ಬಳಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಸೋಮವಾರ ಸಂಜೆ ಘಟನೆ ನಡೆದಿದೆ.
ಟ್ರ‍್ಯಾಕ್ಟರ್‌ಗೆ ಹಿಂದಿನಿAದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಲಾರಿ ಚಾಲಕ ಫಯಾಜ್ ಹಾಗೂ ಸಂಡೂರು ತಾಲೂಕಿನ ಕಾಳಿಂಗೇರಿಯ ಟ್ರ‍್ಯಾಕ್ಟರ್ ಚಾಲಕ ಹುಲ್ಲೇಶ್, ಅದೇ ಗ್ರಾಮದ ಕೊತ್ಲಪ್ಪ, ಶಿವಪ್ಪ, ಬಾಲಕ ಯಶವಂತ ಅವರಿಗೆ ತೀವ್ರ ಗಾಯಗಳಾಗಿದ್ದು, ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಟ್ರ‍್ಯಾಕ್ಟರ್ ಟ್ರಾಲಿಯಲ್ಲಿ ಭತ್ತದ ಮೂಟೆಗಳು ತುಂಬಿಕೊAಡು ತಾಲೂಕಿನ ಮರಿಯಮ್ಮನಹಳ್ಳಿಯ ರೈಸ್ ಮಿಲ್ ಗೆ ಬರುತ್ತಿದ್ದಾಗ, ತಮಿಳುನಾಡಿನಿಂದ ಮುಂಬೈಗೆ ಅಮನದಾಜು 12 ಟನ್ ಮಾವಿನಕಾಯಿ ಸಾಗಿಸುತ್ತಿದ್ದ ಲಾರಿ ಹಿಂದಿನಿAದ ಡಿಕ್ಕಿ ಹೊಡೆದ ರಭಸಕ್ಕೆ ಹೆದ್ದಾರಿಯಲ್ಲಿ ಲಾರಿ ಪಲ್ಟಿ ಹೊಡೆದು ಮಾವಿನಕಾಯಿಗಳು ಚಲ್ಲಾಪಿಲ್ಲಿಯಾಗಿದ್ದವು. ಅರ್ಧ ಗಂಟೆಗೂ ಹೆಚ್ಚು ಕಾಲ ಚಿತ್ರದುರ್ಗ–ಹೊಸಪೇಟೆ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ನಿರ್ಮಾಣವಾಗಿತ್ತು. ಮರಿಯಮ್ಮನಹಳ್ಳಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಂಚಾರಕ್ಕೆ ಅನವು ಮಾಡಿಕೊಟ್ಟರು. ಇನ್ನು ಪ್ರಕರಣ ದಾಖಲಾಗಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net