ಸರ್ಕಾರಿ ಸಿಬ್ಬಂದಿಯ ಸಣ್ಣ ಬೇಜವಾಬ್ದಾರಿಯಿಂದ ಹಂಪಮ್ಮ ಯಾತನೆ ಅನುಭವಿಸುತ್ತಿದ್ದಾರೆ. ಜೀವಂತ ವಾಗಿದ್ದೇನೆ ಎಂದು ಸಾಬೀತುಪಡಿಸಲು ಈ ಮಹಿಳೆ ಗ್ರಾಮ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾಧಿಕಾರಿ ಕಚೇರಿ ಅಲೆದಾಡಿದರೂ ಆಧಾರ್‌ನಲ್ಲಿ ಬದುಕುವ ಭರವಸೆ ಕಾಣುತ್ತಿಲ್ಲ. ಮತ್ತೊಂದೆಡೆ ಬದುಕಿದ್ದಾಗಲೇ ಮೃತ ಪಟ್ಟಿದ್ದಾರೆ ಎಂದು ನಮೂದಾಗಿರುವುದು ಮಾನಸಿಕವಾಗಿಯೂ ದೊಡ್ಡ ಆಘಾತ ನೀಡಿದೆ. ಸರ್ಕಾರದ ಗೃಹಲಕ್ಷ್ಮಿ, ಪಿಎಂ ಕಿಸಾನ್, ಪಡಿತರ ಚೀಟಿ, ಬ್ಯಾಂಕ್ ಪಾಸ್ ಬುಕ್ ಸೇರಿ ಎಲ್ಲ ದಾಖಲೆಗಳೂ ಆಧಾರ್ ಸಂಖ್ಯೆಯೊAದಿಗೆ ಬೆಸೆದುಕೊಂಡಿರುವುದರಿAದ ಹಂಪಮ್ಮ ಅವರಿಗೆ ಈಗ ಆಧಾರ್ ಸಮಸ್ಯೆ ಶಾಪವಾಗಿದೆ.