ಹಂಪಿ ಅಭಿವೃದ್ಧಿಗೆ ಪ್ರವಾಸಿಗನಂತೆ ಅವಲೋಕನೆ

ಕಮಲಾಪುರಕೆರೆ ಬಳಿ ಭೇಟಿ ನೀಡಿ, ಕ್ರಿಯಾಯೋಜನೆಯರೂಪುರೇಷೆಯನ್ನು ಕೆಎಂಇಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಬಿಜ್ಜೂರ್ ಪರಿಶೀಲಿಸಿದರು. ಅರಣ್ಯ ಉಪ ಸಂರಕ್ಷಣಾಧಿಕಾರಿಅನುಪಮಾ, ಪ್ರವಾಸೋದ್ಯಮ ಇಲಾಖೆ ಡಿಡಿ ಪ್ರಭುಲಿಂಗ ತಳಿಕೆರೆ, ಹವಾಮ ಆಯುಕ್ತರಮೇಶ್ ವಟಿಗಲ್, ಪುರಾತತ್ತ್ವ ಇಲಾಖೆ ಅಧಿಕಾರಿ ಸುನೀಲ್‌ಇತರರಿದ್ದರು.
ಕಮಲಾಪುರಕೆರೆ ಬಳಿ ಭೇಟಿ ನೀಡಿ, ಕ್ರಿಯಾಯೋಜನೆಯರೂಪುರೇಷೆಯನ್ನು ಕೆಎಂಇಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಬಿಜ್ಜೂರ್ ಪರಿಶೀಲಿಸಿದರು. ಅರಣ್ಯ ಉಪ ಸಂರಕ್ಷಣಾಧಿಕಾರಿಅನುಪಮಾ, ಪ್ರವಾಸೋದ್ಯಮ ಇಲಾಖೆ ಡಿಡಿ ಪ್ರಭುಲಿಂಗ ತಳಿಕೆರೆ, ಹವಾಮ ಆಯುಕ್ತರಮೇಶ್ ವಟಿಗಲ್, ಪುರಾತತ್ತ್ವ ಇಲಾಖೆ ಅಧಿಕಾರಿ ಸುನೀಲ್‌ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೆಎಂಇಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಬಿಜ್ಜೂರ್ ಹೇಳಿಕೆ
ಹೊಸಪೇಟೆ: ಹಂಪಿಗೆ ಅಭಿವೃದ್ಧಿಗೆ ಕೆಎಂಇಆರ್‌ಸಿಯಿAದ ಅನುದಾನಅನುಮೊದನೆಆಗಿದ್ದುಕ್ರಿಯಾಯೋಜನೆತಯಾರಿಸಬೇಕಿದೆಎಂದು ಕೆಎಂಇಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಬಿಜ್ಜೂರ್ ತಿಳಿಸಿದರು.
ಹಂಪಿ ಸೇರಿದಂತೆಇತರೆಕಡೆ ಬುಧವಾರ ಬೇಟಿ ನೀಡಿ ಪರಿಶೀಲನೆ ನಡೆಸಿದ ನಂತರ, ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಹಂಪಿ ಮೂಲಸೌಕರ್ಯಕ್ಕೆ ಈಗಾಗಲೇ 96 ಕೋಟಿಅನುಮೋದನೆಯಾಗಿದ್ದು, ಪ್ರವಾಸಿಗರಿಗೆ ಯಾವರೀತಿಯ ಸೌಕರ್ಯ ನೀಡಬೇಕು. ಬಂದಕೂಡಲೇಏನೆಲ್ಲ ಅಗತ್ಯತೆಗಳಿವೆ ಎಂಬುದನ್ನುಒಬ್ಬ ಪ್ರವಾಸಿಗನಾಗಿ ಭೇಟಿ ನೀಡಿ ಅವಲೋಕಿಸಿದ್ದೇನೆ. ಕಮಲಾಪುರಕೆರೆ ಹಾಗೂ ಪಾರ್ಕಿಂಗ್‌ಅಭಿವೃದ್ಧಿಗೆಒತ್ತು ನೀಡಲಾಗಿದೆ. ಜಿಲ್ಲೆಯಅಭಿವೃದ್ಧಿಗೆ ಬೇಕಾದಷ್ಟು ಹಣ ಲಭ್ಯವಿದೆ, ಆದರೆ ಸರಿಯಾದ ಸಮಯಕ್ಕೆ ಪ್ರಸ್ತಾವನೆಗಳು ಸಲ್ಲಿಕೆಯಾಗುವುದು ಮುಖ್ಯ. ಈ ನಿಟ್ಟಿನಲ್ಲಿ ಅಧಿಕಾರಿಳಿಗೆ ಸಭೆ ನಡೆಸಿ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಜಿಲ್ಲೆಗೆ ಭೇಟಿ ನೀಡುತ್ತಿದ್ದು, ನಿರಂತರವಾಗಿ ಜಿಲ್ಲಾಧಿಕಾರಿಗಳ ಜತೆಗೆ ಸಂಪರ್ಕದಲ್ಲಿದ್ದು, ಯೋಜನೆಗಳ ಅನುಷ್ಠಾನ ಮತ್ತು ಪ್ರಸ್ತಾವನಗಳ ಬದಲಾವಣೆಕುರಿತು ಸೂಚನೆ ನೀಡುತ್ತಿದ್ದೇನೆಎಂದು ಹೇಳಿದರು.

2.52 ಕೋಟಿರೂ. ಪ್ರಸ್ತಾವನೆ ಬಾಕಿ

ಕೆಎಂಇಆರ್‌ಸಿ ಯೋಜನೆಯಡಿ ವಿಜಯನಗರಜಿಲ್ಲೆಗೆ ಲಭ್ಯವಿರುವಒಟ್ಟುಅನುದಾನದಲ್ಲಿಇನ್ನೂ 2,520 ಕೋಟಿ ರೂ.ಗಳ ಪ್ರಸ್ತಾವನೆಗಳು ಸಲ್ಲಿಕೆಯಾಗದೆ ಬಾಕಿ ಉಳಿದಿವೆ. ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ವಿಜಯನಗರ ಈ ವಿಚಾರದಲ್ಲಿ ಹಿಂದಿರುವುದುಕAಡುಬAದಿದೆ. ಜಿಲ್ಲೆಗೆ ನಾನಾ ವಲಯಗಳಲ್ಲಿ ಒಟ್ಟು 4,107 ಕೋಟಿಅನುದಾನ ಲಭ್ಯವಿದೆ. ಇದರಲ್ಲಿ 2023ರಿಂದ ಈವರೆಗೆ ಕೇವಲ 99 ಪ್ರಸ್ತಾವನೆಗಳಿಗೆ 1,710 ಕೋಟಿರೂ. ಮಾತ್ರಅನುಮೋದನೆ ಸಿಕ್ಕಿದೆ. ಇನ್ನುಳಿದ ಬೃಹತ್ ಮೊತ್ತದಅನುದಾನ ಬಳಕೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಶೀಘ್ರವಾಗಿ ಪ್ರಸ್ತಾವನೆ ಸಿದ್ಧಪಡಿಸಿ ಮೇಲುಸ್ತುವಾರಿ ಪ್ರಾಧಿಕಾರಕ್ಕೆ ಕಳುಹಿಸಬೇಕು. ಜಿಲ್ಲಾ ಮಟ್ಟದ ಇಲಾಖೆಗಳಿಂದ ಬರುವ ಪ್ರಸ್ತಾವನೆಗಳು ಮೊದಲುಜಿಲ್ಲಾ ಸಮಿತಿಗಳಿಗೆ ಬರುತ್ತವೆ. ನಂತರ ಅವುಗಳನ್ನು ಅಂತಿಮಅನುಮೋದನೆಗಾಗಿ ಮೇಲುಸ್ತುವಾರಿ ಪ್ರಾಧಿಕಾರದ ಮುಂದೆ ಮಂಡಿಸಲಾಗುತ್ತದೆ. ಪಿಡಬ್ಲ್ಯೂಡಿ, ಗ್ರಾಮೀಣ ಮತ್ತು ನಗರ ನೀರು ಸರಬರಾಜು ಇಲಾಖೆಗಳಲ್ಲಿನ ಬಾಕಿ ಇರುವ ಪ್ರಸ್ತಾವನೆಗಳನ್ನು ತಕ್ಷಣ ಕಳುಹಿಸಲು ಅಧಿಕಾರಿಗಳಿಗೆ ಆದೇಶಿಸಲಾಗಿದೆ. ಬಾಕಿ ಇರುವಅನುದಾನದಲ್ಲಿಗಣಿಗಾರಿಕೆ ನಡೆಯುವ ತಾಲೂಕುಗಳಿಗೆ ಹಾಗೂ ಗಣಿ ಲಾರಿಗಳು ಸಂಚರಿಸುವ ರಸ್ತೆಗಳ ಅಭಿವೃದ್ಧಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುವುದು ಕೆಎಂಇಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಬಿಜ್ಜೂರ್ ತಿಳಿಸಿದರು.
ಜಿಲ್ಲಾಧಿಕಾರಿಕವಿತಾಎಸ್.ಮನ್ನಿಕೇರಿ, ಅರಣ್ಯ ಉಪ ಸಂರಕ್ಷಣಾಧಿಕಾರಿಅನುಪಮಾಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net