ವಚನಗಳ ಮೂಲಕ ಹೊಸ ನಾಂದಿ

ಸಿರಿಗೇರಿ ಗ್ರಾಪಂ ಆವರಣದಲ್ಲಿ ಶ್ರೀ ಸಿದ್ದರಾಮೇಶ್ವರ ಜಯಂತಿ ಆಚರಿಸಲಾಯಿತು. ಕಾರ್ಯದರ್ಶಿ ಸಿದ್ದರಾಮ, ಪ್ರಮುಖರಾದ ವಿ ಹನುಮೇಶ್, ಬಕಾಡೆ ಈರಯ್ಯ, ಲಕ್ಷ್ಮಣ್, ಭಜಂತ್ರಿ ರಮೇಶ್, ಗ್ರಾಪಂ ಸಿಬ್ಬಂದಿ ಇದ್ದರು.
ಸಿರಿಗೇರಿ ಗ್ರಾಪಂ ಆವರಣದಲ್ಲಿ ಶ್ರೀ ಸಿದ್ದರಾಮೇಶ್ವರ ಜಯಂತಿ ಆಚರಿಸಲಾಯಿತು. ಕಾರ್ಯದರ್ಶಿ ಸಿದ್ದರಾಮ, ಪ್ರಮುಖರಾದ ವಿ ಹನುಮೇಶ್, ಬಕಾಡೆ ಈರಯ್ಯ, ಲಕ್ಷ್ಮಣ್, ಭಜಂತ್ರಿ ರಮೇಶ್, ಗ್ರಾಪಂ ಸಿಬ್ಬಂದಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶರಣ
  • ಜೀವನ ಚರಿತ್ರೆ

ವಚನಗಳ ಮೂಲಕ ಹೊಸ ನಾಂದಿ

ಸಿರಿಗೇರಿ: ಸಿದ್ದರಾಮೇಶ್ವರರು ವಚನಗಳ ಮೂಲಕ ಪ್ರಪಂಚಕ್ಕೆ ಹೊಸ ನಾಂದಿ ಹಾಡಿದ ಶರಣ. ಇವರ ಜೀವನ ಚರಿತ್ರೆಯನ್ನು ತಿಳಿಯಬೇಕು ಎಂದು ಗ್ರಾಪಂ ಕಾರ್ಯದರ್ಶಿ ಸಿದ್ದರಾಮ ತಿಳಿಸಿದರು.
ಗ್ರಾಮದ ಗಾಪಂ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ 854ನೇ ಶ್ರೀ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭೋವಿ ಸಮಾಜದ ವಿ.ಹನುಮೇಶ್ ಮಾತನಾಡಿ, ಕಾರ್ಮಿಕ ಇಲಾಖೆ ಕಟ್ಟಡ ಕಾರ್ಮಿಕರಿಗೆ ವಾರ್ಷಿಕ ರಿನ್ವಲ್ ಮಾಡುವುದನ್ನು ನಿಲ್ಲಿಸಿ, ರಾಜ್ಯ ಸರ್ಕಾರದಿಂದ ಖಾಯಂ ಆದೇಶ ಪ್ರತಿ ನೀಡಬೇಕು. ಇದು ಬಡವರಿಗೆ ಸಹಾಯಕರಿಯಾಗಬೇಕು ಎಂದರು.
ಪ್ರಮುಖರಾದ ಯಂಕಪ್ಪ, ನಾಗರಾಜ, ವೆಂಕಟೇಶ್, ದಾನಪ್ಪ, ಆದೆಪ್ಪ, ಶೇಖರ್, ರಾಂಪುರ ಗುಂಡಪ್ಪ, ಪೂಜಾರಿ ಹೊನ್ನೂರ, ಸಿ.ನಾಗರಾಜ್, ಶ್ರೀನಿವಾಸ್ ಗುರುಸಿದ್ಧ ಬಸವರಾಜ್, ಬಕಾಡೆ ಈರಯ್ಯ ಕರಿಬಸಪ್ಪ, ಸಲೀಂ, ರಾಮ್ ಬಾಬು, ಕಾಳಿ ಎರ್ರೆಪ್ಪ, ಕುಂಬಾರ ಬಸವರಾಜ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net