ಹಾಸ್ಟೆಲ್ ಗೋಡೆಗಳು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ಬಾಗಿಲು, ಕಿಟಕಿಗಳು ಮುರಿದು ಬಿದ್ದಿವೆ. ಶೌಚಗೃಹದ ಬಾಗಿಲು, ಕಿಟಕಿಗಳು ಗೆದ್ದಿಲು ಹಿಡಿಯುತ್ತಿವೆ. ಕೊಠಡಿಗಳ ಛಾವಣಿ ಶಿಥಿಲಗೊಂಡಿದ್ದು, ಕುಸಿಯುವ ಭೀತಿ ಇದೆ. ಕತ್ತಲಾದ ಬಳಿಕ ಈ ನಿಲಯದ ಮುಂಭಾಗದಲ್ಲಿ ಅಡ್ಡಾಡುವ ಪಕ್ಕದ ನಿಲಯದ ವಿದ್ಯಾರ್ಥಿಗಳು ಭಯದಿಂದ ನಡೆದಾಡಬೇಕಿದೆ.