ಕೂಡ್ಲಿಗಿ: ಮೂರು ರಾಜ್ಯಗಳಲ್ಲಿ ಗೆಲ್ಲುವ ಮೂಲಕ ಬಿಜೆಪಿ ಹಿಂದು ಅಸ್ಮಿತೆಯನ್ನು ಸಾಬೀತು ಪಡಿಸಿದೆ ಎಂದು ಪಕ್ಷದ ಮಂಡಲ ಅಧ್ಯಕ್ಷ ಕೆ.ನಾಗರಾಜ ಬಣವಿಕಲ್ಲು ಹೇಳಿದರು.
ಪಟ್ಟಣದ ಮದಕರಿ ವೃತ್ತದಲ್ಲಿ ಸಂಭ್ರಮಾಚರಣೆಯಲ್ಲಿ ಸೋಮವಾರ ಮಾತನಾಡಿದರು. ಪಶ್ಚಿಮ ಬಂಗಾಳದಲ್ಲಿ ವಲಸಿಗರಿಗೆ ಇನ್ನಿಲ್ಲದ ಅವಕಾಶ ನೀಡಿ ಹಿಂದುಗಳ ಮೇಲೆ ದೌರ್ಜನ್ಯ ನಡೆಸಿದ ಮಮತಾ ಬ್ಯಾನರ್ಜಿಗೆ ಅಲ್ಲಿನ ಹಿಂದುಗಳು ತಕ್ಕಪಾಠ ಕಲಿಸಿದ್ದಾರೆ. 90 ಲಕ್ಷ ವಲಸಿಗ ಮತದಾರರನ್ನು ಎಸ್‌ಐಆರ್ ಮೂಲಕ ಮತದಾರರ ಪಟ್ಟಿಯಿಂದ ತೆಗೆದು ನ್ಯಾಯಸಮ್ಮತ ಚುನಾವಣೆ ನಡೆಸಿದ ಹಿನ್ನೆಲೆಯಲ್ಲಿ ಬಿಜೆಪಿ ನಿಚ್ಚಳ ಗೆಲುವು ಪಡೆಯಲು ಸಾಧ್ಯವಾಯಿತು ಎಂದರು.
ಪಕ್ಷದ ಕಾರ್ಯಕರ್ತರು ಚುರುಮುರಿ ಹಂಚುವ ಮೂಲಕ ಗೆಲುವನ್ನು ಸಂಭ್ರಮಿಸಿದರು. ಜಿಲ್ಲಾ ಉಪಾಧ್ಯಕ್ಷ ಸೂರ್ಯಪಾಪಣ್ಣ ಪ್ರಮುಖರಾದ ಎಸ್.ದುರುಗೇಶ್, ಪಿ.ಮಂಜುನಾಥ ನಾಯಕ, ವಸಂತ ಯಾದವ್,ಸಿದ್ದೇಶ್ ಮಂಗಾಪುರ, ವೀರಭದ್ರಪ್ಪ, ಲಕ್ಷ್ಮೀ ಕಾಂತರಾಜ, ಸರೋಜಮ್ಮ ಸೂರ್ಯಪಾಪಣ್ಣ, ಭರತ್ ಕುಮಾರ್ ಇತರರಿದ್ದರು.