ಮರಿಯಮ್ಮಹಳ್ಳಿಯಲ್ಲಿ ಸಂಭ್ರಮದ ಜೋಡಿ ರಥೋತ್ಸವ

ಮರಿಯಮ್ಮನಹಳ್ಳಿಯ ಶ್ರೀ ಲಕ್ಷ್ಮಿನಾರಾಯಣಸ್ವಾಮಿ ಮತ್ತು ಶ್ರೀ ಆಂಜನೇಯಸ್ವಾಮಿ ಉಭಯದೇವರುಗಳ ಜೋಡಿ ರಥೋತ್ಸವವು ಸಂಭ್ರಮದಿAದ ಜರುಗಿತು.
ಮರಿಯಮ್ಮನಹಳ್ಳಿಯ ಶ್ರೀ ಲಕ್ಷ್ಮಿನಾರಾಯಣಸ್ವಾಮಿ ಮತ್ತು ಶ್ರೀ ಆಂಜನೇಯಸ್ವಾಮಿ ಉಭಯದೇವರುಗಳ ಜೋಡಿ ರಥೋತ್ಸವವು ಸಂಭ್ರಮದಿAದ ಜರುಗಿತು.
Published on
ಹೊಸಪೇಟೆ: ತಾಲೂಕಿನ ಆರಾದ್ಯ ದೈವಗಳಾದ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ಮತ್ತು ಆಂಜನೇಯಸ್ವಾಮಿಯ ಜೋಡಿ ರಥೋತ್ಸವವು ಬಹಳ ವಿಜೃಂಭಣೆಯಿAದ ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ಜರುಗಿತು.
ರಥಗಳಿಗೆ ರಿಮೋಟ್ ಕಂಟ್ರೋಲ್ ಪವರ್ ಬ್ರೇಕರ್ ಹಾಗೂ ಸ್ಟೇರಿಂಗ್ ಅಳವಡಿಸಿರುವುದರಿಂದ ಸುಸೂತ್ರವಾಗಿ ರಥಗಳನ್ನು ಎಳೆದು ಮತ್ತೆ ಮೂಲ ಸ್ಥಾನಕ್ಕೆ ತಂದು ನಿಲ್ಲಿಸಲಾಯಿತು. ರಥೋತ್ಸವದ ಹಿನ್ನಲೆಯಲ್ಲಿ ಉಭಯ ದೇವರುಗಳಿಗೆ ವಿಶೇಷ ಅಲಂಕಾರ ಮಾಡಿ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು.
ಹಿಂದೂ, ಮುಸ್ಲೀಮರು ಸೇರಿದಂತೆ ವಿವಿಧ ಸಮುದಾಯಗಳ ಭಕ್ತಾದಿಗಳು ಬೆಳಗಿನಿಂದಲೇ ದೇವರ ದರ್ಶನ ಪಡೆದು ಹೂವು ಹಣ್ಣು ಕಾಯಿ ಅರ್ಪಿಸಿ ಪುನೀತರಾದರು. ಭಕ್ತರು ಹೊತ್ತ ಉರುಳು ಸೇವೆ, ದೀರ್ಘದಂಡ ನಮಸ್ಕಾರ ಸೇರಿದಂತೆ ವಿವಿಧ ಹರಕೆಗಳನ್ನುತೀರಿಸಿ ಪುನಿತರಾದರು.
ರಥೋತ್ಸವ ಮುನ್ನ ಎರಡೂ ರಥೋತ್ಸವ ಪಟಹರಾಜು ಮಾಡಲಾಯಿತು. ಮರಿಯಮ್ಮನಹಳ್ಳಿಯ ಕರಿಯಮ್ಮನವರ ರಮೇಶ್ ಎಂಬುವವರು ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ಪಟವನ್ನು 5.10 ಲಕ್ಷ ರೂಪಾಯಿಗಳಿಗೆ ಹಾಗೂ ಆಂಜನೇಯಸ್ವಾಮಿ ಪಟವನ್ನು ಈಡಿಗರ ಅಜ್ಜಯ್ಯ ಎಂಬುವರು 9.51 ಲಕ್ಷ ರೂಪಾಯಿಗೆ ಹರಾಜು ಪಡೆದರು. ರಥೋತ್ಸವದ ಹಿನ್ನಲೆಯಲ್ಲಿ ಎಸ್ಪಿ ಎಸ್.ಜಾಹ್ನವಿ, ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ಪಿಐ ವಿಕಾಸ್ ಲಮಾಣಿ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತು ಕೈಗೊಳ್ಳಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net