ಕಲಾಪ್ರೇಮಿಗಳ ದಶಕಗಳ ಕನಸು ನನಸು

ಹೊಸಪೇಟೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಲೈಯಿಂಗ್ ಫೌಂಡೇಷನ್ ಸ್ಟೋನ್ ಆಫ್ ರಂಗಮಂದಿರದ ಭೂಮಿ ಪೂಜೆ ನೆರವೇರಿಸಿದರು. ಸಂಸದ ಇ.ತುಕಾರಾಂ, ಶಾಸಕ ಎಚ್.ಆರ್.ಗವಿಯಪ್ಪ, ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿ.ಪಂ.,ಸಿಇಒ ಅಕ್ರಂ ಷಾ ಇತರರಿದ್ದರು.
ಹೊಸಪೇಟೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಲೈಯಿಂಗ್ ಫೌಂಡೇಷನ್ ಸ್ಟೋನ್ ಆಫ್ ರಂಗಮಂದಿರದ ಭೂಮಿ ಪೂಜೆ ನೆರವೇರಿಸಿದರು. ಸಂಸದ ಇ.ತುಕಾರಾಂ, ಶಾಸಕ ಎಚ್.ಆರ್.ಗವಿಯಪ್ಪ, ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿ.ಪಂ.,ಸಿಇಒ ಅಕ್ರಂ ಷಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹಂಪಿ ಸ್ಮಾರಕಗಳ ಶೈಲಿಯ ರಂಗಮಂದಿರಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೂಮಿ ಪುಜೆ
ಹೊಸಪೇಟೆ: ವಿಜಯನಗರ ಜಿಲ್ಲಾ ಕೇಂದ್ರ ನಗರದಲ್ಲಿ ಸುಸಜ್ಜಿತ ರಂಗಮಂದಿರವಿಲ್ಲ ಎಂಬ ಕಲಾಪ್ರೇಮಿಗಳ ಹಾಗೂ ಸಾರ್ವಜನಿಕರ ದಶಕಗಳ ಕನಸು ಕೊನೆಗೂ ಕಾಲ ಕೂಡಿಬಂದಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಬಳಿ ನೂತನ ಲೈಯಿಂಗ್ ಫೌಂಡೇಷನ್ ಸ್ಟೋನ್ ಆಫ್ ರಂಗಮಂದಿರದ ಭೂಮಿ ಪೂಜೆ ಮಾಡಿದರು.
ಹೊಸಪೇಟೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಸಸಿಗೆ ನೀರೆರೆಯುವ ಮೂಲಕ 99 ವೆಚ್ಚದ ಉದ್ಯನ ನಿರ್ಮಾಣಕ್ಕೆ ಚಾಲನೆ ನೀಡಿದರು. ಶಾಸಕ ಎಚ್‌.ಆರ್.ಗವಿಯಪ್ಪ, ಹುಡಾ ಅಧ್ಯಕ್ಷ ಎಚ್‌.ಎನ್.ಇಮಾಮ್ ನಿಯಾಜಿ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಇತರರಿದ್ದರು.

​ಸಂಸದರನಿಧಿಯ 5 ಕೋಟಿ ರೂ. ವೆಚ್ಚದಲ್ಲಿ ಈ ಭವ್ಯ ರಂಗಮಂದಿರ ತಲೆಎತ್ತಲಿದ್ದು, ನಿರ್ಮಿತಿ ಕೇಂದ್ರವು ಇದರ ನಿರ್ಮಾಣದ ಹೊಣೆ ಹೊತ್ತಿದೆ. ಇದರೊಂದಿಗೆ, ಎಸ್ ಬಿಐ ಸಿಎಸ್‌ಆರ್ ನಿಡಿಯ 99 ಲಕ್ಷ ರೂ. ವೆಚ್ಚದಲ್ಲಿ ರಂಗಮಂದಿರದ ಆವರಣದಲ್ಲೇ ನಿರ್ಮಾಣವಾಗಲಿರುವ ಸುಂದರ ಉದ್ಯಾನಕ್ಕೂ ಸಚಿವರು ಚಾಲನೆ ನೀಡಿದರು. ವಿತ್ತ ಸಚಿವರ ಆಪ್ತ ಕಾರ್ಯದರ್ಶಿ ಅನಿರುದ್ಧ್ ಶ್ರವಣ್, ಸಂಸದ ಇ.ತುಕಾರಾಂ, ಶಾಸಕ ಎಚ್.ಆರ್.ಗವಿಯಪ್ಪ, ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್, ಹುಡಾ ಅಧ್ಯಕ್ಷ ಇಮಾಮ್ ನಿಯಾಜಿ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿ.ಪಂ.,ಸಿಇಒ ಅಕ್ರಂ ಷಾ, ಎಸ್ಪಿ ಎಸ್.ಜಾಹ್ನವಿ, ಸಿದ್ದಲಿಂಗೇಶ್ ರಂಗಣ್ಣನವರ್ ಸೇರಿ ಇತರರಿದ್ದರು.
ಉದ್ದೇಶಿತ ಜಿಲ್ಲಾಡಳಿತ ಭವನದ ಸಮೀಪದಲ್ಲೇ ಸುಮಾರು 3 ಎಕರೆ ವಿಸ್ತೀರ್ಣದ ಜಾಗದಲ್ಲಿ ಈ ಕಲಾ ಸಂಕೀರ್ಣ ನಿರ್ಮಾಣವಾಗಲಿದ್ದು, ಸದ್ಯ 1.5 ಎಕರೆ ಜಮೀನಿನಲ್ಲಿ 37,521 ಚದರ ಅಡಿಯಲ್ಲಿ ಯೋಜನೆ ಆರಂಭಗೊಳ್ಳಲಿದೆ. ಹಂಪಿ ಹಾಗೂ ವಿಜಯನಗರದ ಐತಿಹಾಸಿಕ ವಾಸ್ತುಶಿಲ್ಪದ ಪರಂಪರೆಯಿಂದ ಪ್ರೇರಿತವಾಗಲಿದೆ. ಸಂಸ್ಕೃತಿ, ಪ್ರದರ್ಶನ ಮತ್ತು ಸಾಂಸ್ಕೃತಿಕ ಕಲಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ದೂರದೃಷ್ಟಿ ಹೊಂದಿರುವ ಈ ಸಂಕೀರ್ಣವು ಭವಿಷ್ಯದ ಸಾಂಸ್ಕೃತಿಕ ಪರಿಸರ ವ್ಯವಸ್ಥೆಗೆ ಪ್ರಮುಖ ಕೇಂದ್ರವಾಗಲಿದೆ.
ಹೊಸಪೇಟೆಯಲ್ಲಿ ನಿರ್ಮಾಣ ಆಗುತ್ತಿರುವ ಲೈಯಿಂಗ್ ಫೌಂಡೇಷನ್ ಸ್ಟೋನ್ ಆಫ್ ರಂಗಮಂದಿರದ ವಿನ್ಯಾಸ.

ಹೇಗೆ ಇರಲಿದೆ ಕಲಾಮಂದಿರ

ಇಲ್ಲಿನ ನಗರಸಭೆ ಆವರಣದ ಹಳೆಯ ಎಂ.ಪಿ.ಪ್ರಕಾಶ್ ರಂಗಮಂದಿರವು ಅವೈಜ್ಞಾನಿಕ ನಿರ್ಮಾಣದಿಂದ ಬಳಕೆಗೆ ಬಾರದೆ ಕಲಾವಿದರು ಸಂಕಷ್ಟ ಎದುರಿಸುತ್ತಿದ್ದರು. ಈಗ ಜಾಗತಿಕ ಮಟ್ಟದ ಈ ಹೊಸ ಸಾಂಸ್ಕೃತಿಕ ಕೇಂದ್ರದ ನಿರ್ಮಾಣದಿಂದ ಇಲ್ಲಿನ ಶಾಸ್ತ್ರೀಯ ಸಂಗೀತ, ನೃತ್ಯ ಪ್ರದರ್ಶನಗಳು, ನಾಟಕಗಳು, ಸಾಂಸ್ಕೃತಿಕ ಹಬ್ಬಗಳು, ರಂಗ ಚಟುವಟಿಕೆಗಳು ಹಾಗೂ ಪ್ರಮುಖ ಸರ್ಕಾರಿ-ಖಾಸಗಿ ಸಮಾರಂಭಗಳಿಗೆ ಅತ್ಯುತ್ತಮ ವೇದಿಕೆ ಸಿಕ್ಕಂತಾಗಿದೆ. ​ನೂತನ ಸಂಕೀರ್ಣದ ವಿಶಿಷ್ಟ ಪ್ರವೇಶ ಮಾರ್ಗವು ಕಲಾ ಪ್ರೇಮಿಗಳಿಗೆ ಹೊಸ ಅನುಭವ ನೀಡಲಿದೆ. ​ಪ್ರವೇಶ ದ್ವಾರ, ನಂತರ ಕಲ್ಲಿನ ರಥ, ರಂಗಮಂಟಪ, ಪ್ರವೇಶ ಮಂಟಪ, ಕಲಾ ಗ್ಯಾಲರಿ, ಮುಖ್ಯ ಸಭಾಂಗಣ ಇರಲಿದೆ. ಸೌಲಭ್ಯಗಳು ಮತ್ತು ಸಾಮರ್ಥ್ಯದೊಂದಿಗೆ ​ರಂಗಮಂದಿರವು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಸುಸ್ಥಿರ ವಿನ್ಯಾಸದೊಂದಿಗೆ ನಿರ್ಮಾಣ ಆಗಲಿದೆ. ಮುಖ್ಯ ಸಭಾಂಗಣದಲ್ಲಿ 500 ಆಸನಗಳು (440 ಸಾರ್ವಜನಿಕ + 60 ವಿಐಪಿ), 120 ಬಾಲ್ಕನಿ ಆಸನಗಳು, ಹಾಗೂ 48 ಮಿನಿ ಥಿಯೇಟರ್‌ ಆಸನಗಳ ಇರಲಿದೆ. ಗ್ರಂಥಾಲಯ, ​ಕಲಾವಿದರ ಸೌಕರ್ಯಕ್ಕಾಗಿ ತಾಲೀಮು ಕೊಠಡಿ, ಎರಡು ಗ್ರೀನ್ ರೂಮ್ಸ್, ಮತ್ತು ಕಲಾವಿದರ ವಸತಿ ಕೊಠಡಿಗಳು. ಆಧುನಿಕ ರೆಕಾರ್ಡಿಂಗ್ ಹಾಗೂ ಡಬ್ಬಿಂಗ್ ಸ್ಟುಡಿಯೋಗಳು ಇರಲಿವೆ. ಇದೇ ಸಂಕೀರ್ಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಯೂ ಕಾರ್ಯನಿರ್ವಹಿಸಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net