ಕಲ್ಟ್ ಯುವಕರಿಗೆ ಇಷ್ಟ ಆಗುವ ಸಿನಿಮಾ

ಹೊಸಪೇಟೆ ವಿಜಯನಗರ ಕಾಲೇಜಿನಲ್ಲಿ ಶುಕ್ರವಾರ ನಡೆದ ಕಲ್ಟ್ ಸಿನಿಮಾ ಪ್ರಮೋಷನ್ ನಲ್ಲಿ ನಾಯಕ ನಟ ಝೈದ್ ಖಾನ್ ಮಾತನಾಡಿದರು
ಹೊಸಪೇಟೆ ವಿಜಯನಗರ ಕಾಲೇಜಿನಲ್ಲಿ ಶುಕ್ರವಾರ ನಡೆದ ಕಲ್ಟ್ ಸಿನಿಮಾ ಪ್ರಮೋಷನ್ ನಲ್ಲಿ ನಾಯಕ ನಟ ಝೈದ್ ಖಾನ್ ಮಾತನಾಡಿದರು
Published on

ಪ್ರಮುಖ ಮುಖ್ಯಾಂಶಗಳು

  • ನಾಯಕ ನಟ ಝೈದ್ ಖಾನ್ ಹೇಳಿಕೆ
ಹೊಸಪೇಟೆ: ಜಮೀರ್ ಅಹ್ಮದ್ ಖಾನ್ ಪುತ್ರ ನಟ ಝೈದ್ ಖಾನ್ ಅಭಿನಯದ ಕಲ್ಟ್ ಸಿನಿಮಾ ತಂಡ ನಗರಕ್ಕೆ ಶುಕ್ರವಾರ ಆಗಮಿಸಿ ಪ್ರಮೋಷನ್ ನಡೆಸಿತು.
ನಗರದ ಪುನೀತ್ ರಾಜಕುಮಾರ್ ಪ್ರತಿಮೆಗೆ‌ ನಾಯಕ ನಟ ಝೈದ್ ಖಾನ್ ಮಾಲಾರ್ಪಣೆ ಮಾಡಿದರು. ಅಲ್ಲಿಂದ ವಿಜಯನಗರ‌ ಕಾಲೇಜಿನ ವರೆಗೆ ನೂರಾರು ಯುವಕರಿಂದ ಬೈಕ್ ರ್ಯಾಲಿ ನಡೆಸಿದರು. ವಿಜಯನಗರ ಕಾಲೇಜಿನಲ್ಲಿ ಪ್ರಮೋಷನ್ ಕಾರ್ಯ ನಡೆಯಿತು. ಈ ವೇಳೆ ಅಯ್ಯೋ ಶಿವನೆ... ಅಯ್ಯೊಯ್ಯೋ ಶಿವನೇ... ಹಾಡಿನ ಮೂಲಕ ವಿದ್ಯಾರ್ಥಿಗಳಿಗೆ ರಂಜಿಸಿದರು.
ಚಿತ್ರದ ನಾಯಕ ನಟ ಝೈದ್ ಖಾನ್ ಮಾತನಾಡಿ, ಈಗಾಗಲೇ ಬನಾರಸ್ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ ಪಾದಾರ್ಪಣೆ ಮಾಡಿರುವೆ. ಬನಾರಸ್' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದೀಗ ಕಲ್ಟ್' ಸಿನಿಮಾದಲ್ಲಿ ನಟಿಸಿರುವೆ. ಈ ಚಿತ್ರಕ್ಕೆ ಉಪಾಧ್ಯಕ್ಷ ಸಿನಿಮಾ ಖ್ಯಾತಿಯ ನಿರ್ದೇಶಕ ಅನಿಲ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ನಟಿ ರಚಿತಾ ರಾಮ್, ಮಲೈಕಾ ಟಿ.ವಸುಪಾಲ್ ಸಹ ಈ ಚಿತ್ರದ ಪ್ರಮುಖ ತಾರಾಬಳಗದಲ್ಲಿದ್ದಾರೆ. ಆರಂಭದಿಂದಲೂ ಕಲ್ಟ್ ಸಿನಿಮಾ ಸಾಕಷ್ಟು ಕುತೂಹಲವನ್ನೂ ಮೂಡಿಸಿದೆ. ಯುವಕರಿಗೆ ಇಷ್ಟ ಆಗುವ ಸಿನಿಮಾ ಇದಾಗಿದೆ. ಜ.23ಕ್ಕೆ ಬಿಡುಗಡೆ ಆಗಲಿದ್ದು, ನೋಡಿ ಆಶೀರ್ವಾದ ಮಾಡಿ. ಹಾಗೂ ಡಿ.11ಕ್ಕೆ ಡಿ ಬಾಸ್ ಸಿನಿಮ ಬಿಡುಗಡೆ ಆಗಲಿದೆ ಎಲ್ಲರೂ ಪ್ರೋತ್ಸಾಹಿಸಬೇಕು ಎಂದರು.
ಹುಡಾ ಅಧ್ಯಕ್ಷ ಎಚ್.ಎನ್.ಎಫ್.ಇಮಾಮ್ ನಿಯಾಜಿ, ಕಾಲೇಜಿನ ಅಧ್ಯಕ್ಷ ಮಲ್ಲಿಕಾರ್ಜುನ ಮೇಟಿ, ಕಾಂಗ್ರೆಸ್ ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಅಶೋಕ್ ನಾಯ್ಕ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net