ವಿಜಯನಗರ ಜಿಲ್ಲೆಗೆ ಶೇ.78/52 ಫಲಿತಾಂಶ

AI
AI
Published on
ಹೊಸಪೇಟೆ: ಪಿಯುಸಿ ಪರೀಕ್ಷೆ ಫಲಿತಾಂಶ ಕೊನೆಗೂ ಹೊರಬಿದ್ದಿದ್ದು, ಬಳ್ಳಾರಿ ವಿಜಯನಗರ ಅವಳಿ ಜಿಲ್ಲೆಗೆ 78.92 ಫಲಿತಾಂಶ ಬಂದಿದೆ. ಅದರಲ್ಲೂ ಕಾಲೇಜುಗಳ ವರ್ಗೀಕರಿಸಿ ನೋಡುವುದಾದರೆ, ವಿಜಯನಗರ ಜಿಲ್ಲೆಗೆ 78.52 ಫಲಿತಾಂಶ ಬಂದಿದೆ.
ವಿಜಯನಗರ ಜಿಲ್ಲೆಯಲ್ಲಿ ಒಟ್ಟು 12378 ವಿದ್ಯಾರ್ಥಿಗಳು ನೊಂದಾಣಿಯಾಗಿ, 12196 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 9576 ವಿದ್ಯಾರ್ಥಿಗಳು ಪಾಸ್ ಆಗಿದ್ದರೆ, 2621 ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ. ಒಟ್ಟು ವಿಜಯನಗರಕ್ಕೆ ಶೇ.78.52 ಫಲಿತಾಂಶ ಬಂದಿದೆ. ಇದರಲ್ಲಿ ಇಬ್ಬರು ಇಬ್ಬರು ವಿದ್ಯಾರ್ಥಿನಿಯರಿಗೆ 598 ಅಂಕ ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ. ಅವಳಿ ಜಿಲ್ಲೆ ಪಿಯುಸಿ ಫಲಿತಾಂಶದಲ್ಲಿ ಮೊದಲ ಸ್ಥಾನ ಪಡೆಯದಿದ್ದರೂ, ವಿದ್ಯಾರ್ಥಿಗಳು ಮಾತ್ರ ಕಳೆದ 11 ವರ್ಷಗಳಿಂದ ನಿರಂತರವಾಗಿ ಮೊದಲ ಸ್ಥಾನ ಪಡೆಯುತ್ತಿದ್ದಾರೆ. ಜಿಲ್ಲೆ ವಿಭಜನೆ ಆಗುವ ಮುನ್ನ ನಿರಂತರ 6 ವರ್ಷಗಳ ಕಾಲ ಹಾಗೂ ವಿಜಯನಗರ ಜಿಲ್ಲೆಯಾಗಿ ವಿಭಜನೆಯಾದ ನಂತರ 5 ವರ್ಷ ಒಟ್ಟು 11 ವರ್ಷಗಳ ಕಾಲ ನಿರಂತರವಾಗಿ ಕೊಟ್ಟೂರು ವಿದ್ಯಾರ್ಥಿಗಳು ರಾಜ್ಯಕ್ಕೆ ಮೊದಲ ಸ್ಥಾನ ಪಡೆದು, ರಾಜ್ಯದ ಜನರ ಗಮನ ಸೆಳೆದಿದ್ದಾರೆ.

ಬಡತನದಲ್ಲೂ ಸಾಧನೆ

ಹರಪನಹಳ್ಳಿ ತಾಲೂಕಿನ ಬಳಿಗನೂರು ಗ್ರಾಮದ ರೈತ ಹನುಮಂತಪ್ಪನ ಮಗಳು ಡಿ.ಎಂ.ಅರ್ಚನಾ ಕಲಾ ವಿಭಾಗದಲ್ಲಿ 598 ಅಂಕ ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ. ತಂದೆ ತಾಯಿಗೆ 5 ಜನ ಮಕ್ಕಳು. ಆರ್ಥಿಕ ಪರಿಸ್ಥಿತಿ ಕಷ್ಟವಾಗಿತ್ತು. ಆದರೂ, ಒಂದರಿAದ 10ನೇ ತರಗತಿಯವರೆಗೆ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದ ಅರ್ಚನಾ ಎಎಸ್ಎಲ್ ಸಿಯಲ್ಲಿ ಶೇ.79 ಫಲಿತಾಂಶ ಪಡೆದಿದ್ದಳು. ಬಡತನದ ನಡುವೆ ನಿರಂತರ ಅಭ್ಯಾಸ ಮೂಲಕ 598 ಅಂಕ ಪಡೆದು ಸಾಧನೆ ಮಾಡಿದ್ದಾಳೆ. ತಹಸೀಲ್ದಾರ್ ಆಗುವ ಕನಸು ಕಂಡಿದ್ದಾಳೆ. ರೈತನ ಮಗಳ ಈ ಸಾಧನೆ ಇತರರಿಗೆ ಪ್ರೇರಣೆಯಾಗಿದೆ.

ಅಂಗನವಾಡಿ ಟೀಚರ್ ಮಗಳು ರಾಜ್ಯಕ್ಕೆ ಟಾಪ್

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಮಂಗಳೂರು ಗ್ರಾಮದ ಸಂಗೀತಾ ಜಿಲ್ಲೆಯ ಕೊಟ್ಟೂರಿನಲ್ಲಿ ವಿದ್ಯಾಭ್ಯಾಸ ಪಡೆದ ಕಲಾ ವಿಭಾಗದಲ್ಲಿ 598 ಅಂಕ ಪಡೆದು ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾಳೆ. ಬಡತನದಲ್ಲೇ ಓದಿದ ಸಂಗೀತಾ ಒಂದರಿAದ 10ನೇ ತರಗತಿವರೆಗೆ ಮಂಗಳೂರು ಸರ್ಕಾರಿ ಶಾಲೆಯಲ್ಲಿಯೇ ಅಭ್ಯಾಸ ಮಾಡಿದ್ದಾಳೆ. ತಂದೆ ವ್ಯವಸಾಯಗಾರರಾಗಿದ್ದು, ತಾಯಿ ಅಂಗನವಾಡಿ ಟೀಚರ್ ಆಗಿದ್ದಾರೆ. ಎಸ್ಸೆಸ್ಸೆಲ್ಸಿಯಲ್ಲಿ ಶೇ.80ರಷ್ಟು ಅಂಕ ಪಡೆದಿದ್ದ ಬಾಲಕಿ, ಪಿಯುಸಿಯಲ್ಲಿ ಇನ್ನಷ್ಟು ಉತ್ತಮ ಅಂಕ ಪಡೆಯಬೇಕೆಂದು ಪ್ರಥಮ ವರ್ಷದಿಂದಲೇ ಕಠಿಣ ಅಭ್ಯಾಸ ಮಾಡಿದ್ದಾಳೆ. ನಿರಂತರ ಓದು, ಮನನ, ಉಪನ್ಯಾಸಕರ ಸಲಹೆ, ಸೂಚನೆ ಪಾಲಿಸಿದ್ದೇ ಸಾಧನೆಗೆ ಸಹಕಾರಿಯಾಗಿದೆ. ಮನೆಯಲ್ಲಿ ತಂದೆ&ತಾಯಿ ಕಷ್ಟ ನೋಡಿ ಚೆನ್ನಾಗಿ ಓದಬೇಕೆಂದು ಪಣ ತೊಟ್ಟಿದ್ದೆ. ಅದರಂತೆ ಉತ್ತಮ ಅಂಕ ಬಂದಿವೆ ಎಂದು ಹರ್ಷ ವ್ಯಕ್ತಪಡಿಸಿದಳು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net