ಕೂಡ್ಲಿಗಿ ತಾಲೂಕಿನ ಕ್ಯಾಸನಕರೆ ಕ್ರಾಸ ಬಳಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಪಡಿತರ ಅಕ್ಕಿಯನ್ನು ಆಹಾರ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರು ಮಂಗಳವಾರ ರಾತ್ರಿ ವಶಪಡಿಸಿಕೊಂಡಿರುವುದು.
ಕೂಡ್ಲಿಗಿ: ಅಕ್ರಮವಾಗಿ ಸಾಗಾಣೆ ಮಾಡುತ್ತಿದ್ದ ಅಂದಾಜು 4 ಲಕ್ಷ ರೂ. ವೆಚ್ಚದ 360 ಚೀಲ ಪಡಿತರ ಅಕ್ಕಿಯನ್ನು ತಾಲೂಕಿನ ಕ್ಯಾಸನಕೆರೆ ಬಳಿ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಮಂಗಳವಾರ ರಾತ್ರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ. ಅಕ್ಕಿಯನ್ನು ಕೊಟ್ಟೂರು ಎಪಿಎಂಸಿಯಲ್ಲಿನ ಆಹಾರ ನಿಗಮದ ಗೋದಾಮಿನಲ್ಲಿ ಸಂಗ್ರಹಿಸಿದ್ದಾರೆ.
ಆಹಾರ ಇಲಾಖೆ ಶಿರೆಸ್ತೇದಾರ್ ಕಮಲಾ ಗುಡ್ಡಪ್ಪನವರ್, ನಿರೀಕ್ಷಕಿ ವಾಣಿಶ್ರೀ, ಕಂದಾಯ ನಿರೀಕ್ಷಿಕ ತಳವಾರ ಪ್ರಭು ಮತ್ತು ಕೂಡ್ಲಿಗಿ ಠಾಣೆಯ ಎಎಸ್ಐ ಬಸವರಾಜ ಶೆಟ್ಟಿ ನೇತೃತ್ವದಲ್ಲಿ ಕಾರ್ಯಚರಣೆ ನಡೆಯಿತು. ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.