ಸಿಡಿಲಿಗೆ 36 ಕುರಿಗಳ ಸಾವು

ಎಐ ಚಿತ್ರ
ಎಐ ಚಿತ್ರ
Published on
ಹಗರಿಬೊಮ್ಮನಹಳ್ಳಿ: ಸಿಡಿಲ ಅರ್ಭಟಕ್ಕೆ 36 ಕುರಿಗಳು ಸತ್ತಿರುವ ಘಟನೆ ತಾಲೂಕಿನ ಉಪ್ಪರಗಟ್ಟಿಯಲ್ಲಿ ಗುರುವಾರ ಸಂಜೆ ನಡೆದಿದೆ.
ಅದೇ ಗ್ರಾಮದ ಉಪ್ಪಾರ್ ಬಿ.ಅಜ್ಜಪ್ಪರಿಗೆ ಸೇರಿದ 30 ಕುರಿಗಳು ಹಾಗೂ ಗೊಲ್ಲರ ಪಿ.ಸುರೇಶ್ ಅವರಿಗೆ ಸೇರಿದ ಅರು ಕುರಿಗಳು ಮೇಯಿಸಿಕೊಂಡು ಸಂಜೆ ಮನೆಯತ್ತ ತೆರಳುತ್ತಿದ್ದರು. ಕೆರೆ ಏರಿಯಾ ಮೇಲೆ ಬರುತ್ತಿದ್ದಂತೆ ಗುಡುಗು ಸಿಡಿಲು ಸಹಿತ ತುಂತುರು ಮಳೆ ಪ್ರಾರಂಭವಾದ ಪರಿಣಾಮ, ಮರದ ಕೆಳಗೆ ನಿಂತಿದ್ದಾರೆ. ಈ ವೇಳೆ ಸಿಡಿಲಿನ ಹೊಡೆತಕ್ಕೆ 36 ಕುರಿಗಳು ಸತ್ತಿವೆ.
ಘಟನಾ ಸ್ಥಳಕ್ಕೆ ತಹಸೀಲ್ದಾರ್ ಆರ್.ಕವಿತಾ ಮತ್ತು ಪಶುಸಂಗೋಪನೆ ಇಲಾಖೆಯ ಅಧಿಕಾರಿ ಡಾ.ಸೂರಪ್ಪ ಭೇಟಿ ನೀಡಿ ಪರಿಶೀಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net