ನಗರದ ಡಾ. ಪುನೀತ್ ರಾಜಕುಮಾರ್ ವೃತ್ತದಲ್ಲಿ ಜೋಳಿಗೆ ಹಾಕಿಕೊಂಡು, ಪುಸ್ತಕ ಮಾರಾಟ ಮಾಡುವ ನೆಪದಲ್ಲಿ ಈ ಮಹಿಳೆಯರು ಮಕ್ಕಳೊಂದಿಗೆ ಭಿಕ್ಷಾಟನೆ ನಡೆಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಇವರನ್ನು ರಕ್ಷಿಸಿದ್ದಾರೆ. ರಕ್ಷಣೆಗೊಳಗಾದವರು ಮೂಲತಃ ಬಳ್ಳಾರಿಯ ಗುಡಾರ ನಗರ, ಕೊಪ್ಪಳ ಮತ್ತು ಕಾರಟಗಿ ತಾಲೂಕಿನ ಸಿದ್ದಾಪುರ ಮೂಲದವರೆಂದು ಗುರುತಿಸಲಾಗಿದೆ.