ಈ ಹಿನ್ನೆಲೆಯಲ್ಲಿ ಬ್ಯಾರೇಜಿನ ನಾಲ್ಕು ಗೇಟ್‌ಗಳ ಮೂಲಕ 24 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಯಿತು. ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಮೂರು ದಿನಗಳಿಂದ ಬ್ಯಾರೇಜಿಗೆ ಒಳಹರಿವು ನಿತ್ಯ ಹೆಚ್ಚಳವಾಗುತ್ತಿದೆ. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ನದಿ ತೀರದ ಪ್ರದೇಶದಲ್ಲಿ ಅಳವಡಿಸಿದ್ದ ಕೃಷಿ ಪಂಪ್‌ಸೆಟ್‌ಗಳನ್ನು ತರಲು ರೈತರು ಪರದಾಡುತ್ತಿದ್ದಾರೆ.