ಹೊಸ ದರೋಜಿಯಲ್ಲಿ ವಿಬಿ ಜಿ ರಾಮ್ ಜಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ಸ್ಥಳಕ್ಕೆ ತಾಪಂ ಇಒ ಮಡಗಿನ ಬಸಪ್ಪ ಭೇಟಿ ನೀಡಿದರು. ತಾಪಂ ಎಡಿ ಮಹೇಶ್ ಕುಮಾರ್, ಪಿಡಿಒ ಜಿಲಾನ್, ಕಾರ್ಯದರ್ಶಿ ರುದ್ರಪ್ಪ, ಟಿ.ಎ.ರಾಘವೇಂದ್ರ, ಸಿಬ್ಬಂದಿ ಇದ್ದರು.
ಸಂಡೂರು: ಹೊಸ ದರೋಜಿಯಲ್ಲಿ ವಿಬಿ ಜಿ ರಾಮ್ ಜಿ ಯೋಜನೆಯಡಿ ಕಾಲುವೆ ಹೊಳು ತೆಗೆಯುವುದು ಹಾಗೂ ಜೋಗ ಗ್ರಾಮದ ಮೇಲಿನ ಕಳ್ಳಿ ಹೂಟಿ ಅಮೃತ ಸರೋವರ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ತಾಪಂ ಇಒ ಮಡಗಿನ ಬಸಪ್ಪ ಸೋಮವಾರ ಭೇಟಿ ನೀಡಿ ವೀಕ್ಷಣೆ ಮಾಡಿದರು.
ವಿಬಿ ಜಿ ರಾಮ್ ಜಿ ಯೋಜನೆಯಡಿ ಒಂದು ದಿನಕ್ಕೆ 382ರೂ. ಕೂಲಿ ಹಾಗೂ ಆರ್ಥಿಕ ವರ್ಷದಲ್ಲಿ ಒಂದು ಕುಟುಂಬಕ್ಕೆ 125 ದಿನ ಕೂಲಿ ಕೆಲಸ ದೊರೆಯಲಿದೆ. ಯೋಜನೆಯಡಿ ಒಟ್ಟು 318 ಕಾಮಗಾರಿಗಳನ್ನು ಅನುಮೋದಿಸಲಾಗಿದ್ದು, ರೈತರ ಅನುಕೂಲಕ್ಕಾಗಿ 60 ದಿನಗಳ ವಿರಾಮ ಸಿಗಲಿದೆ. ಬರಗಾಲ ಛಾಯೆ ಇರುವುದರಿಂದ ಕೂಲಿಕಾರರು ಗುಳೆ ಹೋಗದೆ ನಿರಂತರವಾಗಿ ಕೆಲಸಕ್ಕೆ ಬಂದು ಈ ಯೋಜನೆಯ ಸೌಲಭ್ಯ ಪಡೆಯಿರಿ ಎಂದರು.