100 ದಿನ ತಾಂತ್ರಿಕ ದೋಷ ಕಾಣಿಸದಂತೆ ಸೇವೆ

ಹೂವಿನಹಡಗಲಿ ಸಾರಿಗೆ ಘಟಕದ 51 ತಾಂತ್ರಿಕ ಸಿಬ್ಬಂದಿಗೆ ವಾಹನ ವೈದ್ಯ ಪ್ರಶಸ್ತಿಯನ್ನು  ವಿಭಾಗೀಯ ನಿಯಂತ್ರಣಾಕಾರಿ ರಾಜೇಶ ಹುದ್ದಾರ ಪ್ರದಾನ ಮಾಡಿದರು. ವಿಭಾಗೀಯ ತಾಂತ್ರಿಕ ಶಿಲ್ಪಿ ನಾಗರಾಜ, ಲೆಕ್ಕಾಧಿಕಾರಿ ಚಿದಾನಂದಪ್ಪ, ಘಟಕ ವ್ಯವಸ್ಥಾಪಕ ಮಹೇಶ, ಲೆಕ್ಕಪರಿವೀಕ್ಷಕ ನಾಗರಾಜ, ಪಾರುಪತ್ತೆದಾರರಾದ ಸಂತೋಷ್, ಮುದ್ದಮ್ಮ, ಸಂಚಾರ ನಿರೀಕ್ಷಕ ವಿಜಯಕುಮಾರ್, ಸಿಬ್ಬಂದಿ ಇದ್ದರು.

Published on
ಹೂವಿನಹಡಗಲಿ: ಪಟ್ಟಣದ ಸಾರಿಗೆ ಘಟಕದ ಸಿಬ್ಬಂದಿ 100 ದಿನ ಘಟಕದ ಯಾವುದೇ ವಾಹನದಲ್ಲಿ ತೊಂದರೆ ಕಾಣದಂತೆ ಕರ್ತವ್ಯ ನಿರ್ವಹಿಸುವ ಮೂಲಕ ಸಂಸ್ಥೆಗೆ ಲಾಭ ತಂದಿದ್ದಾರೆ ಎಂದು ಕೆಕೆಆರ್‌ಟಿಸಿ ವಿಭಾಗೀಯ ನಿಯಂತ್ರಣಾಕಾರಿ ರಾಜೇಶ ಹುದ್ದಾರ ಹೇಳಿದರು.
ಪಟ್ಟಣದ ಸಾರಿಗೆ ಘಟಕದಲ್ಲಿ ತಾಂತ್ರಿಕ ಸಿಬ್ಬಂದಿಗೆ ‘ಉತ್ತಮ ವಾಹನ ವೈದ್ಯ ಪ್ರಶಸ್ತಿ ಪ್ರದಾನ ಹಾಗೂ ಅಭಿನಂದನಾ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಗುರುವಾರ ಮಾತನಾಡಿದರು.
ಹೂವಿನಹಡಗಲಿ ಘಟಕದಲ್ಲಿ ಕಳೆದ ಕೆಲವು ವರ್ಷಗಳಿಂದ ಹಳೆಯ ವಾಹನಗಳು ಸಂಚರಿಸುತ್ತಿವೆ. ಘಟಕದ ತಾಂತ್ರಿಕ ಸಿಬ್ಬಂದಿ ವಾಹನಗಳಲ್ಲಿ ಯಾವುದೇ ತಾಂತ್ರಿಕ ದೋಷ ಕಾಣಿಸದಂತೆ ಸುಮಾರು 100 ದಿನ ಕರ್ತವ್ಯ ನಿರ್ವಹಿಸುವ ಮೂಲಕ ಮಾದರಿಯಾಗಿದ್ದಾರೆ ಎಂದರು.
ಘಟಕದ 51 ಸಿಬ್ಬಂದಿ ಪೈಕಿ 16 ಜನ ಮಹಿಳಾ ಸಿಬ್ಬಂದಿಯಿದ್ದು, ಪ್ರತಿ ಸಿಬ್ಬಂದಿಯೂ ಕರ್ತವ್ಯದಲ್ಲಿ ಪ್ರಾಮಾಣಿಕತೆ ಮೆರೆದಿರುವುದು ಶ್ಲಾಘನೀಯ. ಪ್ರಶಂಸನೀಯ ಪ್ರಮಾಣಪತ್ರ ನೆಪ ಮಾತ್ರವಾಗಿದ್ದು, ಸಿಬ್ಬಂದಿಯ ಶ್ರಮ ಮತ್ತು ಕರ್ತವ್ಯದ ಮೇಲಿನ ಕಾಳಜಿಯನ್ನು ತೋರಿಸುತ್ತದೆ. ಸಂಸ್ಥೆಯ ಸಿಬ್ಬಂದಿ ಸಾರ್ವಜನಿಕರೊಂದಿಗೆ ಸಂಯಮದಿಂದ ವರ್ತಿಸುವ ಮೂಲಕ ಸೇವೆಯನ್ನು ಒದಗಿಸಬೇಕು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net