ಘಟಕದ 51 ಸಿಬ್ಬಂದಿ ಪೈಕಿ 16 ಜನ ಮಹಿಳಾ ಸಿಬ್ಬಂದಿಯಿದ್ದು, ಪ್ರತಿ ಸಿಬ್ಬಂದಿಯೂ ಕರ್ತವ್ಯದಲ್ಲಿ ಪ್ರಾಮಾಣಿಕತೆ ಮೆರೆದಿರುವುದು ಶ್ಲಾಘನೀಯ. ಪ್ರಶಂಸನೀಯ ಪ್ರಮಾಣಪತ್ರ ನೆಪ ಮಾತ್ರವಾಗಿದ್ದು, ಸಿಬ್ಬಂದಿಯ ಶ್ರಮ ಮತ್ತು ಕರ್ತವ್ಯದ ಮೇಲಿನ ಕಾಳಜಿಯನ್ನು ತೋರಿಸುತ್ತದೆ. ಸಂಸ್ಥೆಯ ಸಿಬ್ಬಂದಿ ಸಾರ್ವಜನಿಕರೊಂದಿಗೆ ಸಂಯಮದಿಂದ ವರ್ತಿಸುವ ಮೂಲಕ ಸೇವೆಯನ್ನು ಒದಗಿಸಬೇಕು ಎಂದರು.