

ಹುಬ್ಬಳ್ಳಿ: ಇಲ್ಲಿಯ ವಿಜಯನಗರದ ಕೆಂಪಣ್ಣನವರ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ವಿಜಯನಗರ ಮಹಿಳಾ ಮಂಡಳದ 46ನೇ ವಾರ್ಷಿಕೋತ್ಸವ ಸಮಾರಂಭ ಏರ್ಪಾಟಾಗಿತ್ತು.
ಸದಸ್ಯರಿಂದ ಶ್ರೀ ಸತ್ಯನಾರಾಯಣ ಪೂಜೆ ನೆರವೇರಿಸಲಾಯಿತು. ಡಾ. ವಿನುತಾ ಕುಲಕರ್ಣಿ ಅವರು ಅತಿಥಿಯಾಗಿ ಆಗಮಿಸಿ, ಮಹಿಳೆಯರಿಗೆ ಆರೋಗ್ಯ ಕಾಳಜಿ ಬಗ್ಗೆ ತಿಳಿಸಿದರು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿನಿಯರು, ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು.
ಮಂಡಳದ ಅಧ್ಯಕ್ಷೆ ಸಂಧ್ಯಾ ದೀಕ್ಷಿತ, ಕಾರ್ಯದರ್ಶಿ ಜ್ಯೋತಿ ದೇಸಾಯಿ, ಉಪಾಧ್ಯಕ್ಷೆ ತಾರಾ ಮುದ್ಲಾಪೂರ, ಸಹ ಕಾರ್ಯದರ್ಶಿ ಅಪರ್ಣಾ ದಿವೇಕರ, ಖಜಾಂಚಿ ಗಿರಿಜಾ ಚಿಕ್ಕಮಠ ಇತರರಿದ್ದರು. ಜಯಾ ಕುಲಕರ್ಣಿ ಹಾಗೂ ರಜನಿ ದೇಸಾಯಿ ನಿರೂಪಿಸಿದರು.