VIDEO| ಭಾರಿ ಗಾಳಿ-ಮಳೆಗೆ ನೀರಿನ ಹನಿಯಂತೆ ಉದುರಿದ ಮಾವು ಬೆಳೆ..!

Mango
Published on

ವಿಜಯನಗರ: ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಗಾಳಿ-ಮಳೆಗೆ ಮನೆಯ ಛಾವಣಿ ಹಾರುವುದರ ಜತೆಗೆ ಹಲವೆಡೆ ಮರಗಳು ಧರೆಗುರುಳಿವೆ.

ಮಳೆಗೂ ಮುನ್ನ ಬೀಸಿದ ಭರ್ಜರಿ ಗಾಳಿಗೆ ಸೊಂಪಾಗಿ ಬೆಳೆದು ನಿಂತಿದ್ದ ಮಾವುಗಳು ನೆಲಕ್ಕೆ ಮಳೆಯಂತೆ ಉದುರಿವೆ. ಈ ಎಲ್ಲ ಘಟನೆ ಕೂಡ್ಲಿಗಿ ತಾಲೂಕಿನ ಶ್ರೀ ಕಂಠಾಪುರ ತಾಂಡದಲ್ಲಿ ನಡೆದಿದೆ.

ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಇಲ್ಲ. ಆದರೆ, ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಕರೊನಾ ನಡುವೆ ಮಳೆಯ ಹೊಡೆತ ಗಾಯದ ಮೇಲೆ ಬರೆ ಎಳೆದಂತಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net