ರೈತರಿಗೆ ಬೆಳೆ ಪರಿಹಾರ ಸಂದಾಯ

news
Published on

ಹೊಸಪೇಟೆ: ಜಿಲ್ಲೆಯಲ್ಲಿ ಕಳೆದ ಮುಂಗಾರು ಹಂಗಾಮಿನಲ್ಲಿ ಮಳೆ ಬಾರದೇ, ಬರಗಾಲ ಎದುರಾಗಿ ಸಂಕಷ್ಟ ಎದುರಿಸಿದ 1.09 ಲಕ್ಷ ರೈತರಿಗೆ 130.08 ಕೋಟಿ ರೂ. ಬೆಳೆಗಳ ಪರಿಹಾರ ಪಾವತಿಗೆ ಅನುದಾನ ಬಿಡುಗಡೆಯಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ತಿಳಿಸಿದರು.

ಜಿಲ್ಲೆಯಲ್ಲಿ ಬರ ಪರಿಸ್ಥಿತಿಯಿಂದ ಹಾನಿಯಾದ ಬೆಳೆಗೆ ಎಸ್‌ಡಿಆರ್‌ಎಫ್ ಹಾಗೂ ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಗರಿಷ್ಟ 2 ಸಾವಿರ ರೂ. ವರೆಗೆ ಬೆಳೆಹಾನಿ ಪರಿಹಾರ ಅನುದಾನ ಬಿಡುಗಡೆ ಸರ್ಕಾರ ಮಾಡಿದೆ. ಅದರಂತೆ ಬೆಳೆ ಸಮೀಕ್ಷೆ ದತ್ತಾಂಶದ ಮಾಹಿತಿಯ ಆಧಾರದ ಮೇಲೆ ಪ್ರೂಟ್ಸ್ ಐಡಿ ಹೊಂದಿರುವ ರೈತರಿಗೆ ಪರಿಹಾರ ತಂತ್ರಾAಶದ ಮೂಲಕ ಹಂತಹAತವಾಗಿ ಪರಿಹಾರ ವಿತರಣೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಈ ವರೆಗೂ ಹತ್ತು ಹಂತಗಳಲ್ಲಿ ಒಟ್ಟು 1,09,543 ರೈತರಿಗೆ 130,08,07,810 ರೂ. ಇನ್ಪುಟ್ ಸಬ್ಸಿಡಿಯನ್ನು ಜಮಾ ಮಾಡಲು ಅನುಮೋದನೆ ನೀಡಲಾಗಿದೆ. ಸರ್ಕಾರದಿಂದ ನೇರವಾಗಿ ಬ್ಯಾಂಕ್ ಖಾತೆಗಳಿಗೆ ಪರಿಹಾರ ಧನವನ್ನು ಜಮಾ ಮಾಡಲಾಗಿದೆ.

ಬಾಕಿ ಉಳಿದ ರೈತರಿಗೆ ಹಂತ-ಹAತವಾಗಿ ಪರಿಹಾರ ಪಾವತಿಸುವ ಕಾರ್ಯವು ಪ್ರಗತಿಯಲ್ಲಿದೆ. ಈಗಾಗಲೇ ಅನುಮೋದನೆ ನೀಡಿರುವ ರೈತರ ಮಾಹಿತಿಯ ಪಟ್ಟಿಯನ್ನು ತಹಸೀಲ್ ಕಚೇರಿ, ನಾಡ ಕಚೇರಿ, ಗ್ರಾಮ ಪಂಚಾಯಿತಿ ಹಾಗೂ ರೈತ ಸಂಪರ್ಕ ಕೇಂದ್ರಗಲ್ಲಿ ಮಾಹಿತಿ ಸಿಗಲಿದೆ. ಹೆಚ್ಚಿನ ಮಾಹಿತಿಗಾಗಿ ಆಯಾ ತಹಸೀಲ್ ಕಚೇರಿಗಳಲ್ಲಿನ ಸಹಾಯವಾಣಿಗಳಿಗೆ ರೈತರು ಫ್ರೂಟ್ಸ್ ಐಡಿ ಸಂಖ್ಯೆಯೊAದಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.

ಹೊಸಪೇಟೆ ತಾಲೂಕಿನಲ್ಲಿ 3.45 ಕೋಟಿ ರೂ. 3,880 ರೈತರಿಗೆ ಸಂದಾಯವಾಗಿದೆ. ಹಗರಿಬೊಮ್ಮನಹಳ್ಳಿ 19.24 ಕೋಟಿ ರೂ. 15,813 ರೈತರಿಗೆ, ಕೂಡ್ಲಿಗಿ 23.12 ಕೋಟಿ ರೂ. 19,010 ರೈತರಿಗೆ, ಕೊಟ್ಟೂರ 14.04 ಕೋಟಿ ರೂ. 12,833 ರೈತರಿಗೆ, ಹಡಗಲಿ 26.93 ಕೋಟಿ ರೂ. 20,925 ರೈತರಿಗೆ ಮತ್ತು ಹರಪನಹಳ್ಳಿ 42.28 ಕೋಟಿ ರೂ. 37,082 ರೈತರಿಗೆ ಬೆಳೆ ಪರಿಹಾರ ಸಂದಾಯವಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net