ವಿಜಯನಗರ ಕಾಲದ ದಾನ ಶಾಸನ ಪತ್ತೆ

28 tth 02
ದಾನಶಾಸನ ಮತ್ತು ವಾಮನಮುದ್ರೆ ಕಲ್ಲು
Published on

ತೀರ್ಥಹಳ್ಳಿ: ಮಣ್ಣಿನೊಳಗೆ ಹುದುಗಿ ಹೋಗಿದ್ದ 500 ವರ್ಷ ಹಳೆಯದಾದ ವಿಜಯನಗರ ಅರಸರ ಕಾಲದ ದಾನ ಶಾಸನದ ಕಲ್ಲೊಂದು ಗುಡ್ಡೇಕೊಪ್ಪದ ಬಳಿ ದೊರೆತಿದೆ. ಸಂಶೋಧಕರಾದ ಎಲ್.ಎಸ್.ರಾಘವೇಂದ್ರ ಮತ್ತು ಪತ್ರಕರ್ತ ಜಿ.ಆರ್.ಸತ್ಯನಾರಾಯಣ ಇದನ್ನು ಸಂಶೋಧನೆ ಮಾಡಿದ್ದಾರೆ.

ಗುಡ್ಡೆಕೊಪ್ಪದ ಕೃಷಿಕ ಹೊಸತೋಟ ವಿಶ್ವನಾಥ ಎಂಬುವವರ ತೋಟದ ಸಮೀಪದಲ್ಲಿ ಮಣ್ಣಿನೊಳಗೆ ಅರ್ಧದಷ್ಟು ಹುದುಗಿ ಹೋಗಿತ್ತು. ಗ್ರಾಮಸ್ಥರೆಲ್ಲರು ಚೌಡಿ ಕಲ್ಲೆಂದು ಭಯ ಭಕ್ತಿಗೆ ಕಾರಣವಾಗಿತ್ತು. ಈ ಕಲ್ಲು ಮತ್ತೆ ಬೆಳಕಿಗೆ ಬರಲು ವಿಶ್ವನಾಥ ಅವರ ಆಸಕ್ತಿಯೇ ಕಾರಣ. ಈ ದಾನ ಶಾಸನದಲ್ಲಿ ಅಲ್ಲಲ್ಲಿ ಅಕ್ಷರಗಳು ಅಳಿಸಿ ಹೋಗಿದ್ದು, ಯಾವ ರಾಜರ ಕಾಲದಲ್ಲಿ ಎಂಬುದು ತಿಳಿಯುತ್ತಿಲ್ಲ. ಎಪಿಗ್ರಾಫಿಯ ಕರ್ನಾಟಕ ಗ್ರಂಥದ ಸಂಪುಟ 13ರ ಪುಟ 416ರಲ್ಲಿ ದಾಖಲಾಗಿರುವಂತೆ ಒಂದಷ್ಟು ವಿವರಗಳಿವೆ. ಸುಮಾರು 14-15ನೇ ಶತಮಾನದೆಂದು ಅಂದಾಜಿಸಲಾಗಿದೆ. ಸುಮಾರು 47 ಸಾಲುಗಳಿರುವ ಭೂಮಿ ದಾನ ಕೊಟ್ಟಿರುವ ಬಗ್ಗೆ ಈ ಶಾಸನದಲ್ಲಿ ತಿಳಿಸಲಾಗಿದೆ.

ತಲೆಊರ ಬ್ರಹ್ಮಮಸಿಯ ಬ್ರಾಹ್ಮರ ಅಗ್ರಹಾರ ತೆಂಕಲು ನಟ್ಟ ವಾಮನ ಮುದ್ರೆಯ ಕಲು ಯಿಂತೀ ಚತುಸ್ಸೀಮೆಯ ದಲೆಊರ ಗ್ರಾ.. ಮಳಲಿಯ ಗ್ರಾಮದ ಚತುಸ್ಸೀಮೆ. ಅಖಂಡ ಬ್ರಹ್ಮೇಶ್ವರ ದೇವರ ಅಮ್ರುತಪಡಿಗೆ ಕೊಟ್ಟು ಯಿಹ ಅಗಸಡಿಯ ಗ್ರಾಮದ ಸೀಮೆಯಲು ಮಳಲಿಯ ಗ್ರಾಮಕೆ, ಸಲುವ ನೀರುವರಿಯ ತೆವರಮೇಲೆ ಅಣಿಯ ಸಸಿಯ ವತ್ತಿನಲು ಪಡುವ ಮುಂತಾಗಿ ನೆಟ್ಟ ವಾಮನಮುದ್ರೇ ಕಲು, ತೆಂಕಲು ಬೆಳುವೆಯ ನಾಡ ಕುಮರದಗಡಿಯ ಮಳಿಯ ಗ್ರಾಮದ ಮಧ್ಯದ ಕಲು ವಾಯಾವಿನಲು ಕಡವತ್ತಿನಲು ಬಡಗಮುಂತಾಗಿಟ್ಟ ವಾಮನ ಮುದ್ರೆಯಕಲು…. ಎಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net