ವಿಜಯನಗರ ಎಂದು ನಾಮಕರಣ ಮಾಡಲಿ, ಬಳ್ಳಾರಿ ಜಿಲ್ಲೆ ವಿಭಜನೆ ಬೇಡ ಎಂದ ಶಾಸಕ ಸೋಮಲಿಂಗಪ್ಪ

MS Somalingappa 2
Published on

ಸಿರಗುಪ್ಪ: ಬಳ್ಳಾರಿ ಎನ್ನುವ ಬದಲು ವಿಜಯನಗರ ಜಿಲ್ಲೆ ಎಂದು ಮರುನಾಮಕರಣ ಮಾಡಿದರೆ ಒಳ್ಳೆಯದು. ಜಿಲ್ಲೆ ವಿಭಜನೆ ಮಾಡುವುದು ಬೇಡ ಎಂದು ಶಾಸಕ ಎಂ.ಎಸ್.ಸೋಮಲಿಂಗಪ್ಪ ತಿಳಿಸಿದರು.ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದರು. ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೆ. ಆದರೆ 2018ರಲ್ಲಿ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗಲಿಲ್ಲ. ಬಹುಮತ ಸಿಕ್ಕಿದ್ದರೆ ನಾನು ಸಚಿವನಾಗುತ್ತಿದ್ದೆ. ಇಂತಹ ಸಂದರ್ಭದಲ್ಲಿ ಸಚಿವ ಸ್ಥಾನ ಕೇಳುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆಯಾದರೆ ನನಗೆ ಸಚಿವ ಸ್ಥಾನ ಸಿಗುವ ಭರವಸೆ ಇದೆ. ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಶ್ರೀರಾಮುಲು ಮತ್ತು ಆನಂದ ಸಿಂಗ್‌ರಲ್ಲಿ ಯಾರು ಆಗುತ್ತಾರೆಂದು ಕೇಳಿದ ಪ್ರಶ್ನೆಗೆ ಇಬ್ಬರಲ್ಲಿ ಪೈಪೋಟಿ ಇದೆ. ಈ ಬಗ್ಗೆ ಹೈಕಮಾಂಡ್ ಮತ್ತು ಸಿಎಂ ಯಡಿಯೂರಪ್ಪ ನಿರ್ಧಾರ ಮಾಡುತ್ತಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net