ವಿಜಯನಗರದಲ್ಲಿ ಬೆಳಗ್ಗೆ 9ಕ್ಕೆ ಶೇ.10ರಷ್ಟು ಮತದಾನ

ವಿಜಯನಗರ
ಹೊಸಪೇಟೆಯಲ್ಲಿ ಮತದಾನ ಮಾಡಿದ ಮಹಿಳೆಯರು
Published on

ಹೊಸಪೇಟೆ: ಬಳ್ಳಾರಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯಲ್ಲಿ ಬೆಳಗ್ಗೆ 7 ಗಂಟೆಯಿಂದ ಮತದಾನ ಶುರುವಾಗಿದ್ದು, ಮತದಾರರು ಉತ್ಸಾಹದಿಂದ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ.
ಮತದಾನವಾಗಿದೆ.

ವಿಜಯನಗರದಲ್ಲಿ ಬಿಸಿಲು ಕೂಡ ಹೆಚ್ಚಾಗಿದ್ದು, ಬಿರು ಬಿಸಿಲಿನಲ್ಲೂ ಮತದಾನ ಜೋರಾಗಿ ನಡೆಯುತ್ತಿದೆ. ಜಿಲ್ಲೆಯಲ್ಲಿ 11 ಕಡೆ ತಾಂತ್ರಿಕ ದೋಷದಿಂದ ಸ್ವಲ್ಪ ತಡವಾಗಿದೆ. ಜಿಲ್ಲೆಯ 4 ವಿಧಾನಸಭಾ ಕ್ಷೇತ್ರದಲದಲಿ ಬೆಳಗ್ಗೆ 9 ಗಂಟೆವರೆಗೂ ಒಟ್ಟಾರೆ ಶೇ.10 ರಷ್ಟು ಮತದಾನವಾಗಿದೆ. ಆರಂಭಿಕ ಮತದಾನದ ಪ್ರಮಾಣ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಶೆ.11.83 ಮತದಾನ ಆಗಿದ್ದು ಸ್ವಲ್ಪ ಮತದಾನ ಹೆಚ್ಚಿದೆ. ಹೂವಿನ ಹಡಗಲಿ ಶೇ.6.60, ಹಗರಿಬೊಮ್ಮನಹಳ್ಳಿ ಶೇ.9.24, ಕೂಡ್ಲಿಗಿ ಶೇ.10.09 ಮತದಾನವಾಗಿದೆ.

ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಸ್ವಾಮಿ, ಪದ್ಮಶ್ರೀ ಮಂಜಮ್ಮ ಜೋಗತಿ, ಶಾಸಕ ಎಚ್.ಆರ್.ಗವಿಯಪ್ಪ, ಮಾಜಿ ಸಚಿವ ಆನಂದ್ ಸಿಂಗ್, ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಬೆಳಗ್ಗೆಯೇ ಮತದಾನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net