ವಿಜಯನಗರ ಜಿಲ್ಲೆಗೆ ತಾಲೂಕು ಸೇರ್ಪಡೆಗಾಗಿ ನಾಳೆ ಕಂಪ್ಲಿ ಬಂದ್: ಹೋರಾಟ ಸಮಿತಿ ನಿರ್ಧಾರ

291120 Kampli Taluku Fight Committee Kampli Band Meeting
ಕಂಪ್ಲಿ ಬಂದ್ ಪೂರ್ವಭಾವಿ ಸಭೆಯಲ್ಲಿ ತಾಲೂಕು ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ ಮಾತನಾಡಿದರು.
Published on

ಕಂಪ್ಲಿ: ವಿಜಯನಗರ ಜಿಲ್ಲೆಗೆ ತಾಲೂಕು ಸೇರಿಸಬೇಕೆಂದು ಆಗ್ರಹಿಸಿ ನ.30ರಂದು ಕಂಪ್ಲಿ ಬಂದ್ ನಡೆಸಲಾಗುವುದು. ಕಂಪ್ಲಿ ತಾಲೂಕನ್ನು ಹೊಸ ಜಿಲ್ಲೆಗೆ ಸೇರಿಸುವವರೆಗೆ ಹೋರಾಟ ನಡೆಯಲಿದೆ ಎಂದು ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಅರವಿ ಬಸವನಗೌಡ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಕಂಪ್ಲಿ ಬಂದ್ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹೋರಾಟಗಾರರು ನಿರುತ್ಸಾಹಿಗಳಾಗಬಾರದು. ಖಂಡಿತವಾಗಿಯೂ ಹೋರಾಟದಿಂದ ವಿಜಯನಗರ ಜಿಲ್ಲೆಗೆ ಕಂಪ್ಲಿ ಸೇರಲಿದೆ ಎಂದರು. ಸಮಿತಿ ಕಾರ್ಯಾಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ ಮಾತನಾಡಿ, ಹೋರಾಟ ಯಶಸ್ವಿಯಾಗಲು ಉಪ ಸಮಿತಿಗಳನ್ನು ರಚಿಸಲಾಗುವುದು ಎಂದರು.

ವಿಜಯನಗರ ಜಿಲ್ಲೆಗೆ ಕಂಪ್ಲಿ ಸೇರದೇ ಇರುವುದಕ್ಕೆ ಆಕ್ಷೇಪಣೆ ಸಲ್ಲಿಸಬೇಕು. ಹೋರಾಟ ಯಶ ಕಾಣುವವರೆಗೂ ಕಂಪ್ಲಿ ಬಂದ್, ರಸ್ತೆ ರೋಖೋ ಚಳವಳಿ, ತಾಲೂಕಿನ ಗಡಿ ಬಂದ್ ಮಾಡಬೇಕು. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಬೇಕು. ಹಾಲಿ-ಮಾಜಿ ಶಾಸಕರು ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ವಿವಿಧ ಸಂಘಟನೆಗಳ ಮುಖಂಡರು ಆಗ್ರಹಿಸಿದರು.

ಸಭೆಯಲ್ಲಿ ಪ್ರಮುಖರಾದ ಕರೇಕಲ್ ಮನೋಹರ, ಬಿ.ಸಿದ್ದಪ್ಪ, ಡಾ.ಎ.ಸಿ.ದಾನಪ್ಪ, ಜಿ.ರಾಮಣ್ಣ, ಜಿ.ಜಿ.ಚಂದ್ರಣ್ಣ, ಬಿ.ವಿ.ಗೌಡ, ಕರೇಕಲ್ ಶಂಕ್ರಪ್ಪ, ಭಟ್ಟ ಪ್ರಸಾದ್, ವೈ.ಅಬ್ದುಲ್ ಮುನಾಫ್, ಹಬೀಬ್ ರೆಹಮಾನ್, ಸಿ.ಎ.ಚನ್ನಪ್ಪ, ಸೈಯದ್ ಉಸ್ಮಾನ್, ವಿ.ಎಲ್.ಬಾಬು, ವಾಲ್ಮೀಕಿ ರಘು, ಎಂ.ರಾಘವೇಂದ್ರ, ಇಟ್ಗಿ ಬಸವರಾಜಗೌಡ, ಎಂ.ಸುಧೀರ್, ಜಿ.ರಾಜಾರಾವ್, ಅಗಳಿ ಪಂಪಾಪತಿ, ಬಿ.ರಮೇಶ್, ಚೆಲ್ಲಾ ವೆಂಕಟನಾಯ್ಡು, ಎಚ್.ಗುಂಡಪ್ಪ, ಜಾಫರ್, ವಿ.ಟಿ.ನಾಗರಾಜ, ಇಸ್ಮಾಯಿಲ್ ಬೇಗ್, ನಾಗೇಂದ್ರ, ಭಾಸ್ಕರರೆಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net