ವಿಜಯನಗರ ಜಿಲ್ಲೆಗೆ ಕೂಡ್ಲಿಗಿ ತಾಲೂಕು ಸೇರ್ಪಡೆ: ಬಿಜೆಪಿ ಮುಖಂಡರ ಸಂಭ್ರಮಾಚರಣೆ

271120 Kudligi Join Vijayanagara Dist
ನೂತನ ವಿಜಯನಗರ ಜಿಲ್ಲೆಗೆ ತಾಲೂಕು ಸೇರ್ಪಡೆ ಮಾಡಿದ್ದನ್ನು ಸ್ವಾಗತಿಸಿ ಕೂಡ್ಲಿಗಿಯಲ್ಲಿ ನಾಗರಿಕರು ಸಂಭ್ರಮಿಸಿದರು.
Published on

ಕೂಡ್ಲಿಗಿ: ವಿಜಯನಗರ ಜಿಲ್ಲೆಗೆ ಕೂಡ್ಲಿಗಿ ತಾಲೂಕು ಸೇರ್ಪಡೆ ವಿಚಾರ ಶುಕ್ರವಾರ ಹೊರಬೀಳುತ್ತಿದ್ದಂತೆ ಬಿಜೆಪಿ ಮುಖಂಡರು ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ, ಮದಕರಿ ವೃತ್ತದ ಬಳಿ ಜಮಾಯಿಸಿ, ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಶಾಸಕ ಎನ್.ವೈ.ಗೋಪಾಲಕೃಷ್ಣಗೆ ಜಯಘೋಷ ಕೂಗಿ, ಹರ್ಷ ವ್ಯಕ್ತಪಡಿಸಿದರು. ನಂತರ ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭ ಬಿಜೆಪಿ ಎಸ್‌ಟಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಬಂಗಾರು ಹನುಮಂತು, ತಾಲೂಕು ಅಧ್ಯಕ್ಷ ಪಿ.ಚಂದ್ರು, ವಾಲ್ಮೀಕಿ ಮಹಾಸಭಾದ ತಾಲೂಕು ಅಧ್ಯಕ್ಷ ಎಸ್.ಸುರೇಶ್, ಪ್ರಮುಖರಾದ ಬಿ.ಕೆ.ರಾಘವೇಂದ್ರ, ಸೂರ್ಯಪಾಪಣ್ಣ , ಕೆ.ಎಚ್.ವೀರನಗೌಡ್ರು, ಪಿ.ಮಂಜುನಾಥ ನಾಯಕ, ಸಿ.ಬಿ.ಜಯರಾಮ್ ನಾಯಕ, ಶ್ರೀಕಾಂತ್, ಮುನ್ನಾ, ಪಾಪಣ್ಣ, ಸೋಮಯ್ಯನವರ ನಾಗರಾಜ, ಸೊಲ್ಲೇಶ್, ರಾಜೇಶ್, ಪಿ.ವಿ.ಕೊತ್ಲಪ್ಪ ಇತರರಿದ್ದರು.

ಕೂಡ್ಲಿಗಿ ತಾಲೂಕಿನ ಜನರ ಒತ್ತಾಸೆಯಂತೆ ವಿಜಯನಗರ ಜಿಲ್ಲೆಗೆ ಕೂಡ್ಲಿಗಿ ತಾಲೂಕು ಸೇರ್ಪಡೆಗೊಳಿಸಿರುವುದು ನನಗೂ ಸಮಾಧಾನ ಹಾಗೂ ಖುಷಿ ತಂದಿದೆ.| ಎನ್. ವೈ.ಗೋಪಾಲಕೃಷ್ಣ ಶಾಸಕ, ಕೂಡ್ಲಿಗಿ ವಿಧಾನಸಭಾ ಕ್ಷೇತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net