ವಿಜಯನಗರ ಜಿಲ್ಲೆಗೆ ಸಂಬಂಧಿಸಿ ಸರ್ಕಾರ ನೀಡಿದ ಮಾಹಿತಿಯಲ್ಲಿ ಗೊಂದಲ: ಶಾಸಕ ಸೋಮಶೇಖರ ರೆಡ್ಡಿ ಹೇಳಿಕೆ

G Somashekhar Reddy
Published on

ಬಳ್ಳಾರಿ: ಬಳ್ಳಾರಿ ಜಿಲ್ಲಾ ವಿಭಜನೆ ವಿಚಾರವಾಗಿ 53 ಸಾವಿರಕ್ಕೂ ಅಧಿಕ ಆಕ್ಷೇಪಣೆ ಸಲ್ಲಿಸಲಾಗಿದೆ. ಆದರೆ, ಸರ್ಕಾರ ನೀಡಿದ ಮಾಹಿತಿಯಲ್ಲೂ ಗೊಂದಲ ಇದೆ ಎಂದು ಶಾಸಕ ಜಿ.ಸೋಮಶೇಖರ್ ರೆಡ್ಡಿ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ನೀಡಿದ ಮಾಹಿತಿ ಪ್ರಕಾರ ಕೇವಲ ನಾಲ್ಕು ಸಾವಿರ ವಿರೋಧ ಇದೆ. ಸರ್ಕಾರ ನೀಡಿದ ಮಾಹಿತಿ ತಪ್ಪಾಗಿದೆ. ಬೇಕಿದ್ದರೆ ನಾನೇ ಬರುವೆ. ನಾವು ಸಲ್ಲಿಸಿದ ಆಕ್ಷೇಪಣೆ ಪರಿಶೀಲನೆ ಮಾಡೋಣಾ ಎಂದರು. ಜಿಲ್ಲಾ ವಿಭಜನೆ ಎಲ್ಲರ ಗಣನೆಗೆ ತೆಗೆದುಕೊಂಡು ನಿರ್ಣಯ ಮಾಡಬೇಕಿತ್ತು. ನಮ್ಮ ಮಾತು ಕೇಳದೆ ಜಿಲ್ಲಾ ವಿಭಜನೆ ಮಾಡಲಾಗಿದೆ. ಜಿಲ್ಲಾ ವಿಭಜನೆ ವಿಚಾರವಾಗಿ ಇಬ್ಬರನ್ನೂ ಕರೆದು ಮಾತನಾಡುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೆ ಜಿಲ್ಲೆ ಒಂದಾಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net