

ಹೊಸಪೇಟೆ: ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ವಿಜಯನಗರ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಗುರುವಾರ 38 ಜನ ಅಭ್ಯರ್ಥಿಗಳಿಂದ ಒಟ್ಟು 41 ನಾಮಪತ್ರಗಳು ಸಲ್ಲಿಸಿದರು. ಗುರುವಾರ ನಾಮಪತ್ರ ಸಲ್ಲಿಕೆ ಅಂತಿಮಗೊಂಡಂತೆ ಜಿಲ್ಲೆಯಲ್ಲಿ ಒಟ್ಟು 93 ಅಭ್ಯರ್ಥಿಗಳಿಂದ 107 ನಾಮಪತ್ರ ಸಲ್ಲಿಕೆಯಾಗಿದ್ದು, ಏ.21 ರಂದು ನಾಮಪತ್ರಗಳ ಪರಿಶೀಲನೆ, ಏ.24 ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದೆ.
ಹೂವಿನಹಡಗಲಿ(ಪರಿಶಿಷ್ಟ ಜಾತಿ) ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಕೃಷ್ಣನಾಯ್ಕ ಎರಡು ನಾಮಪತ್ರ ಸಲ್ಲಿಸಿದ್ದಾರೆ. ಆಮ್ ಆದ್ಮಿ ಪಕ್ಷದಿಂದ ಎನ್.ಶ್ರೀಧರ ನಾಯ್ಕ, ಜೆಡಿಎಸ್ ಪಕ್ಷದ ಕಾಯಣ್ಣನವರ ಪುತ್ರಪ್ಪ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಭೋಜ್ಯಾನಾಯ್ಕ, ರಾಣಿ ಚನ್ನಮ್ಮ ಪಕ್ಷ ಇಂಡಿಯಾ ಪಕ್ಷದ ಲಕ್ಕಪ್ಪ ಅಂಗಡಿ, ಸ್ವತಂತ್ರ ಅಭ್ಯರ್ಥಿ ರಮೇಶ್ ಎಂ. ಅವರು ಉಮೇದುವಾರಿಕೆ ಸಲ್ಲಿಸಿದ್ದಾರೆ.
ಹಗರಿಬೊಮ್ಮನಹಳ್ಳಿ(ಪರಿಶಿಷ್ಟ ಜಾತಿ) ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ನೇಮಿರಾಜ ನಾಯ್ಕ ಕೆ., ಬಹುಜನ ಸಮಾಜ ಪಕ್ಷದ ಹೆಚ್.ತಿಪ್ಪೇಸ್ವಾಮಿ, ಆಮ್ ಆದ್ಮಿ ಪಕ್ಷದ ತಿಪ್ಪೇಸ್ವಾಮಿ ವೆಂಕಟೇಶಪ್ಪ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಿ.ಶಿವಮೂರ್ತಿ, ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದಿಂದ ಆರ್. ಸುರೇಶ ರಾಂಪುರದ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸುಗುಣ ಕೆ., ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷ ಹಾಗೂ ಸ್ವತಂತ್ರ ಅಭ್ಯರ್ಥಿಯಾಗಿ ಎಎಂಎ ಸುರೇಶ್ ಕುಮಾರ್, ಎಚ್.ಮಂಜುನಾಥ್, ಜೆ.ಅಂಜಿನಪ್ಪ, ವಿಜಯನಾಯ್ಕ, ಪರಮೇಶ್ವರ ಎಲ್. ಹಾಗೂ ಡಾ.ವಿ.ಹೆಚ್.ಹನುಮಂತಪ್ಪ ಅವರು ನಾಮಪತ್ರ ಸಲ್ಲಿಸಿದ್ದಾರೆ.
ವಿಜಯನಗರ(ಸಾಮಾನ್ಯ) ವಿಧಾನಸಭಾ ಕ್ಷೇತ್ರದಿಂದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಎ.ವಿಜಯಕುಮಾರ್, ಆಮ್ ಆದ್ಮಿ ಪಕ್ಷದ ಮಂಜುನಾಥ್, ಸ್ವತಂತ್ರ ಅಭ್ಯರ್ಥಿಗಳಾಗಿ ವೇಣುಗೋಪಾಲ್ ಡಿ., ಎಚ್.ಜಿ.ವಿರುಪಾಕ್ಷ, ಪಿ.ಮೌಲಾ ಅಲಿ, ಸುಲೇಮಾನ್, ಕೆ.ಶರಣಪ್ಪ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಕೂಡ್ಲಿಗಿ(ಪರಿಶಿಷ್ಟ ಪಂಗಡ) ವಿಧಾನಸಭಾ ಕ್ಷೇತ್ರದಿಂದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿ ಚಿತ್ತರ ಚನ್ನವೀರ, ಸ್ವತಂತ್ರ ಅಭ್ಯರ್ಥಿ ಬಿ.ಹುಲಿಕುಂಟೆಪ್ಪ, ಕೆ.ಲಲಿತಾ, ಬಂಗಾರಿ ಹನುಮಂತ ಅವರು ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ಹರಪನಹಳ್ಳಿ(ಸಾಮಾನ್ಯ) ವಿಧಾನಸಭಾ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳಾಗಿ ನಾಗರಾಜ್ ಹೆಚ್., ಸುಜಾತಾ ನಾಗರಾಜ, ಜೆಡಿಎಸ್‌ನಿಂದ ಎನ್.ಎಂ.ನೂರ್ ಅಹಮ್ಮದ್, ಕರ್ನಾಟಕ ಮಕ್ಕಳ ಪಕ್ಷದ ಜಯಣ್ಣ ಕೆ., ಸ್ವತಂತ್ರ ಅಭ್ಯರ್ಥಿಗಳಾಗಿ ಜಿ.ಕಲಿವೀರನ್ ಗೌಡ, ಲತಾ ಮಲ್ಲಿಕಾರ್ಜುನ, ಸಿ.ವಿ.ಲತಾ, ಸಂಗವ್ವ ಕೆ. ಉತ್ತಂಗಿ ಹಾಗೂ ಬಿ.ಎಂ.ಗುರುಮೂರ್ತಿ ಅವರು ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.