ವಿಜಯನಗರ ಜಿಲ್ಲೆಯಾಗುವ ವಿಶ್ವಾಸವಿದೆ ಎಂದ ಅರಣ್ಯ ಸಚಿವ ಆನಂದ ಸಿಂಗ್

050320 Hosapete Development Works Bhoomi Pooja Anand Singh
Published on

ಹೊಸಪೇಟೆ: ವಿಜಯನಗರ ಜಿಲ್ಲೆ ಆಗುತ್ತದೆ ಎಂಬ ವಿಶ್ವಾಸವಿದೆ. ವಿಜಯನಗರ ಕ್ಷೇತ್ರದ ಅಭಿವೃದ್ಧಿಗಾಗಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ 6.36 ಕೋಟಿ ರೂ. ವೆಚ್ಚದ 19 ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಅರಣ್ಯ ಸಚಿವ ಆನಂದ ಸಿಂಗ್ ಹೇಳಿದರು.

ನಗರದಲ್ಲಿ ಪೊಲೀಸ್ ವಸತಿಗೃಹದ ಬಳಿ ಗುರುವಾರ ವಿವಿಧ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಸಚಿವನಾದ ನಂತರ ಮೊದಲಬಾರಿಗೆ ಹೊಸಪೇಟೆ ಸಿದ್ಧಿ ವಿನಾಯಕ ದೇವಸ್ಥಾನದಿಂದ ಧೋಬಿಘಾಟ್‌ವರೆಗೆ 75 ಲಕ್ಷ ರೂ.ನಲ್ಲಿ ರಸ್ತೆ ಅಭಿವೃದ್ಧಿ, 80 ಲಕ್ಷ ರೂ.ವೆಚ್ಚದ ಹಂಪಿ ರಸ್ತೆಯಿಂದ ಭಟ್ರಹಳ್ಳಿ ಆಂಜನೇಯ ಬೈಪಾಸ್ ಸೇರುವ ರಸ್ತೆ ಸೇರಿ ಒಟ್ಟು 6.36 ಕೋಟಿ ರೂ. ಕಾಮಗಾರಿಗಳಿಗೆ ಚಾಲನೆ ನೀಡಿದ್ದೇನೆ. ಅನೇಕ ಅಭಿವೃದ್ಧಿ ಕೆಲಸಗಳು ಆಗಬೇಕಿದೆ. ಹೊಸಪೇಟೆ ನಗರ ಸ್ವಚ್ಛತೆಗಾಗಿ ಕಾರ್ಖಾನೆಗಳಿಗೆ ಐದು ವರ್ಷಗಳ ಅವಧಿಗೆ ದತ್ತು ನೀಡುವ ಯೋಜನೆ ರೂಪಿಸಲಾಗುವುದು ಎಂದರು.

ರಾಜ್ಯ ಬಜೆಟ್ ರೈತ ಪರವಾಗಿದೆ. ವಿರೋಧ ಪಕ್ಷದವರು ಹಣಕಾಸಿನ ಕೊರತೆ ಇದೆ ಎಂದು ಟೀಕೆ ಮಾಡುತ್ತಿದ್ದಾರೆ. ಹಣಕಾಸಿನ ಕೊರತೆ ಇದ್ದರೂ ಸವಾಲ್ ಆಗಿ ಸ್ವೀಕರಿಸಿರುವ ಸಿಎಂ ಬಿ.ಎಸ್.ಯಡಿಯೂರಪ್ಪನವರು ಜನಪರ ಬಜೆಟ್ ಮಂಡಿಸಿದ್ದಾರೆ. ಏತ ನೀರವಾರಿಗಾಗಿ 248 ಕೋಟಿ ರೂ.ಗೆ ಅನುಮತಿ ದೊರೆತಿದೆ.
| ಆನಂದ ಸಿಂಗ್
ಅರಣ್ಯ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net