

ಹೊಸಪೇಟೆ: ವಿಜಯನಗರ ಜಿಲ್ಲೆಯ ಜಿಲ್ಲಾ ಪಂಚಾಯಿತಿ ನೂತನ ಸಿಇಒ ಆಗಿ ಐಎಎಸ್ ಅಧಿಕಾರಿ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಶಾ ಶುಕ್ರವಾರ ಅಧಿಕಾರ ಸ್ವೀಕರಿಸಿದರು.
ನಿರ್ಗಮಿತ ಸಿಇಒ ಸದಾಶಿವ ಬಿ.ಪ್ರಭು ನೂತನ ಜಿಪಂ ಸಿಇಓ ಅವರು ಅಧಿಕಾರ ಹಸ್ತಾಂತರಿಸಿದರು. ಇವರಿಗೆ ಇನ್ನೂ ಸ್ಥಳ ಕೂಡ ನಿಯೋಜನೆಯಾಗಿಲ್ಲ. 2020ರ ಬ್ಯಾಚ್ ನ ಕರ್ನಾಟಕ ಕೇಡರನ ಐಎಎಸ್ ಅಧಿಕಾರಿಯಾಗಿರುವ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಶಾ ಅವರು ಮೂಲತಃ ಮಣಿಪುರ ರಾಜ್ಯದ ಇಂಪಾಲ್ ನಿವಾಸಿ. ಕಂಪ್ಯೂಟರ್ ಸಾಯನ್ಸ್ ಎಂಜಿನಿಯರಿAಗ್ ಅಧ್ಯಯನ ಮಾಡಿದ್ದಾರೆ.
ಇವರು ಈ ಮೊದಲು ಒಂದು ವರ್ಷದಿಂದ ಹೊಸಪೇಟೆ ಉಪ ವಿಭಾಗಿಯಾಧಿಕಾರಿ ಹಾಗೂ ಹಂಪಿ ನಿರ್ವಹಣ ಪ್ರಾಧಿಕಾರದ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು.