ವಿಜಯನಗರ ಕಾಲುವೆಗಳಿಗೆ ಸಮನಾಗಿ ನೀರು ಹಂಚಿ

news
ಶಾಸಕ ಎಚ್.ಆರ್.ಗವಿಯಪ್ಪ
Published on

ಹೊಸಪೇಟೆ: ವಿಜಯನಗರದ ಪುರಾತನ ಕಾಲುವೆಗಳಿಗೆ ಸಮನಾಗಿ ನೀರು ಹಂಚಿಕೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಶಾಸಕ ಎಚ್.ಆರ್.ಗವಿಯಪ್ಪ ಬೆಂಗಳೂರಿನಲ್ಲಿ ಗುರುವಾರ ಮನವಿ ಮಾಡಿದ್ದಾರೆ.

ಬೆಂಗಳೂರಿನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಗುರುವಾರ ನಡೆದ ರಾಜ್ಯ ನೀರಾವರಿ ನಿಗಮದ ಸಭೆಯಲ್ಲಿ ವಿಜಯನಗರ ಕಾಲುವೆಗಳ ನಿರ್ವಹಣೆಗೆ ಪ್ರತ್ಯೇಕ ನಿಗಮ ಸ್ಥಾಪನೆಯಾಗಬೇಕು. ಕಾಲುವೆಗಳ ಆಧುನೀಕರಣ ಕಾಮಗಾರಿಗಳಿಗೆ ಹೆಚ್ಚುವರಿ ಅವಧಿ ನಿಗದಿ. ಕಾಲುವೆಗಳಿಗೆ ಸಮಾನ ನೀರು ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯನಗರ ಕಾಲುವೆ ವ್ಯಾಪ್ತಿಯ ಬೆಲ್ಲ ಆಣೆಕಟ್ಟಿನಿಂದ ತಲವಾರಘಟ್ಟವರೆಗೆ ನದಿ ಪಾತ್ರದ ಬೆಲ್ಲ, ತುರ್ತಾ, ರಾಮಸಾಗರ ಹಾಗೂ ಬೆಳಗೋಡ್ ಆಣೆಕಟ್ಟು ವ್ಯಾಪ್ತಿಯಲ್ಲಿ ಚೆಕ್ ಡ್ಯಾಂಗಳ ನಿರ್ಮಿಸುವುದು, ತಾಲೂಕಿನ ಕಮಲಾಪುರ ವ್ಯಾಪ್ತಿಯಲ್ಲಿ ವಿಜಯನಗರ ಅರಸರ ಕಾಲದ ಕೆರೆ ಅಭಿವೃದ್ದಿಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net