ವಿಜಯನಗರದಲ್ಲಿ ಬಿಜೆಪಿ ಗೆಲುವು ಖಚಿತ,ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಹೇಳಿಕೆ

BJP
ಹೊಸಪೇಟೆಯಲ್ಲಿ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಮತ್ತು ಬಿಜೆಪಿ ಅಭ್ಯರ್ಥಿ ಸಿದ್ಧಾರ್ಥ ಸಿಂಗ್ ಕುಟುಂಬ ಸಮೇತರಾಗಿ ನಗರದ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜು ಮತಗಟ್ಟೆಯಲ್ಲಿ ಮತದಾನ ಮಾಡಿದರು.
Published on

ಹೊಸಪೇಟೆ: ಈ ಬಾರಿ ವಿಜಯನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಿದ್ಧಾರ್ಥ ಸಿಂಗ್ ಗೆಲುವು ನಿಶ್ಚಿತವಾಗಿದೆ. ವಿರೋಧಿಗಳ ವದಂತಿಗಳಿಗೆ ಮೇ 13ರಂದು ಉತ್ತರ ಸಿಗಲಿದೆ ಎಂದು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಹೇಳಿದರು.

ನಗರದ ಪುಣ್ಯಮೂರ್ತಿ ವೃತ್ತದ ಬಳಿಯ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜಿನ ಮತಗಟ್ಟೆಯಲ್ಲಿ ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂತನ ವಿಜಯನಗರ ಜಿಲ್ಲೆಯಲ್ಲಿ ಮೊದಲ ಬಾರಿಗೆ ಯುವಕ ಸಿದ್ಧಾರ್ಥ ಸಿಂಗ್ ಗೆ ಬಿಜೆಪಿ ಅವಕಾಶ ನೀಡಿದೆ. ಚುನಾವಣಾ ಪೂರ್ವದಲ್ಲಿ ಕ್ಷೇತ್ರದಲ್ಲಿ ಸಂಚಾರ ಕೈಗೊಂಡು, ಮತದಾರರ ಮನಗೆದ್ದಿರುವ ಸಿದ್ಧಾರ್ಥ ಸಿಂಗ್ ಗೆಲುವು ಖಚಿತವಾಗಿದೆ. ಈ ಸಮಯದಲ್ಲಿ ಗೆಲುವಿನ ಅಂತರದ ಕುರಿತು ಮಾತನಾಡಿದರೆ, ಅತಿಯಾದ ವಿಶ್ವಾಸ ಆಗಲಿದೆ ಎಂದರು.

ಹಿರಿ- ಕಿರಿಯರು ಆರ್ಶೀವದಿಸುತ್ತಾರೆ ಎಂಬ ವಿಶ್ವಾಸ

ಬಿಜೆಪಿ ಅಭ್ಯರ್ಥಿ ಸಿದ್ಧಾರ್ಥ ಸಿಂಗ್ ಮಾತನಾಡಿ, ಈ ಹಿಂದೆ ಮೂರು ಬಾರಿ ನಾನು ಕ್ಷೇತ್ರದ ಮತದಾರರನಾಗಿದ್ದೆ. ಈಗ ನಾನೇ ಅಭ್ಯರ್ಥಿಯಾಗಿದ್ದೇನೆ. ಈ ಬಾರಿ ವಿಜಯನಗರ ಕ್ಷೇತ್ರದಲ್ಲಿ ನನ್ನ ಗೆಲುವು ನಿಶ್ಚಿತವಾಗಿದೆ. ನನ್ನ ತಂದೆ ಆನಂದ ಸಿಂಗ್ ಮಾಡಿದ ಕೆಲಸ, ಕಾರ್ಯಗಳನ್ನು ಕ್ಷೇತ್ರದಲ್ಲಿ ಮುಂದುವರೆಸುವ ನಿಟ್ಟಿನಲ್ಲಿ ಕ್ಷೇತ್ರದ ಎಲ್ಲ ಹಿರಿ- ಕಿರಿಯರು ಆರ್ಶೀವದಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net