ಟೈ ಬ್ರೇಕರ್‌ನಲ್ಲಿ ಒಲಿದ ವಿಜಯಲಕ್ಷ್ಮೀ

19-npk -6
Published on


ದುಗ್ಗಳ ಸದಾನಂದ ನಾಪೋಕ್ಲು:
ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿಯ ಶುಕ್ರವಾರದ ಪಂದ್ಯಗಳಲ್ಲಿ ಚೇನಂಡ ಮತ್ತು ಮುಕ್ಕಾಟಿರ(ಬೋಂದ) ತಂಡಗಳು ಟೈ ಬ್ರೇಕರ್ ನಲ್ಲಿ ಗೆಲುವು ಸಾಧಿಸಿದವು. ಚೇನಂಡ ತಂಡ ಮಾಚಿಮಂಡ ತಂಡದ ವಿರುದ್ಧ ಟೈ ಬ್ರೇಕರ್ ನಲ್ಲಿ 3- 0 ಅಂತರದ ಜಯ ಸಾಧಿಸಿತು. ಮತ್ತೊಂದು ಪಂದ್ಯದಲ್ಲಿ ಮುಕ್ಕಾಟಿರ ತಂಡ (ಬೋಂದ) ಟೈ ಬ್ರೇಕರ್ ನಲ್ಲಿ ಬಿದ್ದಂಡ ತಂಡದ ವಿರುದ್ಧ 5-4 ಅಂತರದಲ್ಲಿ ಗೆಲುವು ಸಾಧಿಸಿತು.


ಪುಲ್ಲಂಗಡ ಮತ್ತು ಮಂಡೇಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪುಲ್ಲಂಗಡ ತಂಡ 1-0 ಅಂತರದಿಂದ ಮಂಡೇಟಿರ ತಂಡದ ವಿರುದ್ಧ ಜಯ ಸಾಧಿಸಿತು. ಮಣವಟ್ಟಿರ ತಂಡ ಮತ್ತು ಚೆಪ್ಪುಡಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೆಪ್ಪುಡಿರ ತಂಡ ಮಣವಟ್ಟಿರ ತಂಡದ ವಿರುದ್ಧ 2-1ಅಂತರದ ಗೆಲುವು ಸಾಧಿಸಿತು. ಚಂದುರ ಮತ್ತು ಪುದಿಯೊಕ್ಕಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚಂದುರ ತಂಡ 2-0 ಅಂತದಲ್ಲಿ ಪುದಿಯೊಕ್ಕಡ ತಂಡದ ವಿರುದ್ಧ ಜಯ ಸಾಧಿಸಿತು. ತೀತಮಾಡ ತಂಡದ ವಿರುದ್ಧ ಚೆಕ್ಕೆರ ತಂಡ 4-0 ಅಂತರದಲ್ಲಿ ಜಯಗಳಿಸಿತು.


ಅಮ್ಮಣಿಚಂಡ ತಂಡಕ್ಕೆ ಕೋಡಿಮಣಿಯಂಡ ತಂಡದ ವಿರುದ್ಧ ಜಯಲಭಿಸಿತು. ಅಮ್ಮಣಿಚಂಡ ತಂಡ 2-0 ಅಂತರದ ಮುನ್ನಡೆ ಸಾಧಿಸಿತು. ಕೊಟ್ಟಂಗಡ ಮತ್ತು ಚಟ್ಟಂಗಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೊಟ್ಟಂಗಡ ತಂಡ 1-0 ಅಂತರದಿಂದ ಹಾಗೂ ಕಂಬೀರಂಡ ಮತ್ತು ಕೊಂಗೆಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಂಬಿರಂಡ 2-0 ಅಂತರದಿಂದ ಗೆಲುವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿತು.


ಮಳೆಯಿಂದಾಗಿ ಕುಲ್ಲಚಂಡ-ಮೇಚಿಯಂಡ, ಬೊಟ್ಟೋಳಂಡ-ನೆರವಂಡ, ಚೇಂದಂಡ-ಚೀಯಕಪೂವಂಡ ಮತ್ತು ಚೋಯಮಾಡಂಡ- ಚೆರುಮಂದಂಡ ತಂಡಗಳ ನಡುವೆ ನಡೆಯ ಬೇಕಿದ್ದ ಪಂದ್ಯಗಳನ್ನು ಶನಿವಾರಕ್ಕೆ ಮುಂದೂಡಲಾಗಿದೆ ಎಂದು ಟೂರ್ನಮೆಂಟ್ ಡೈರೆಕ್ಟರ್ ಅಂಜಪರವಂಡ ಕುಶಾಲಪ್ಪ ತಿಳಿಸಿದರು.

ಇಂದಿನ ಪಂದ್ಯಗಳು.
ಮೈದಾನ ಒಂದು
8 ಗಂಟೆಗೆ ಕುಲ್ಲಚಂಡ-ಮೇಚಿಯಂಡ
9 ಗಂಟೆಗೆ ಕಲಿಯಂಡ-ಕನ್ನಂಡ
10 ಗಂಟೆಗೆ ಮಾತ್ರಂಡ-ಕೊಟ್ಟಂಗಡ
11 ಗಂಟೆಗೆ ಚೇನಂಡ-ಚೀಯಕಪೂವಂಡ
1 ಗಂಟೆಗೆ ಮೇರಿಯಂಡ-ಕುಪ್ಪಂಡ (ಕೈಕೇರಿ)
2 ಗಂಟೆಗೆ ಪಾಡೆಯಂಡ-ಕರಿನೆರವಂಡ
3 ಗಂಟೆಗೆ ನಂಬುಡಮಾಡ-ನಾಪಂಡ
ಮೈದಾನ 2
10 ಗಂಟೆಗೆ ಬೊವ್ವೇರಿಯಂಡ-ಅಪ್ಪನೆರವಂಡ
11 ಗಂಟೆಗೆ ಸಣ್ಣುವಂಡ-ಚೇಂದೀರ
1 ಗಂಟೆಗೆ ಕೊಳ್ಳಿರ-ಐಚೆಟ್ಟಿರ
2ಗಂಟೆಗೆ ಕೆಲೇಟಿರ-ಕಡೇಮಾಡ
3 ಗಂಟೆಗೆ ಚೋಯಮಾಡಂಡ-ಚೆರುಮಂದಂಡ
2 ಗಂಟೆಗೆ ಐನಂಡ-ಮುರುವಂಡ
3 ಗಂಟೆಗೆ ಚೌರೀರ (ಹೊದ್ದೂರು)-ಬಾಳೆಯಡ

19--ಎನ್ ಪಿಕೆ6.
ನಾಪೋಕ್ಲುವಿನ ಚೆರಿಯಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ ಕ್ರೀಡಾಂಗಣದಲ್ಲಿ ಕೊಡವ ಕುಟುಂಬಗಳ ನಡುವಿನ ಟೂರ್ನಿಯ ಶುಕ್ರವಾರದ ಪಂದ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net