

ವಿಜಯವಾಣಿ ಸುದ್ದಿಜಾಲ ಗದಗ
ಶ್ರಾವಣ ಮಾಸದ ನಿಮಿತ್ಯ ಶಾಲಾ ಮಕ್ಕಳಿಗೆ ಸಿಹಿ ಭೋಜನ ವ್ಯವಸ್ಥೆ ಮತ್ತು ಬರವಣಿಗೆಯ ಸಾಮಗ್ರಿಗಳನ್ನು ವಿತರಿಸುವ ಕಾರ್ಯಕ್ಕೆ ಕದಳಿ ವೇದಿಕೆ ಕೈಗೊಂಡಿರುವ ಈ ಕಾರ್ಯ ಅತ್ಯುತ್ತಮ ಕಾರ್ಯ ಎಂದು ಸಾಂಸತಿಕ ಚಿಂತಕ ವಿಜಯಕುಮಾರ ಹಿರೇಮಠ ಹೇಳಿದರು.
ಬುಧವಾರ ಗದಗ ಜಿಲ್ಲಾ ಅಕ್ಕಮಹಾದೇವಿ ಕದಳಿ ವೇದಿಕೆಯಿಂದ ನಗರದ ಸರ್ಕಾರಿ ಶಾಲೆ ನಂ. 5 ರಲ್ಲಿ ನಡೆದ ಅಮೃತ ಭೋಜನ ಜ್ಞಾನ ಸಿಂಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶಾಲಾ ಮಕ್ಕಳು ಶೈಣಿಕವಾಗಿ ಅಭಿವೃದ್ಧಿ ಆಗಬೇಕು. ಬಡ ಕುಟುಂಬದ ಮಕ್ಕಳ ಶೈಣಿಕ ಅಭಿವೃದ್ಧಿಗೆ ಕೈಜೋಡಿಸಲು ಸಂಟನೆಗಳ ಭಾಗವಹಿಸುವಿಕೆ ಅವಶ್ಯ ಎಂದರು.
ಚಿಂತಕಿ ಸುಮಾ ಪಾಟೀಲ ಮಾತನಾಡಿ, ಮಕ್ಕಳು ಮುಗ್ದ ಮನಸ್ಸಿನ ಕುಸುಮಗಳು. ಇವರ ಶಿಣಕ್ಕೆ ಒತ್ತು ನೀಡಿ ಮುಖ್ಯ ವಾಹಿನಿಗೆ ತರುವಲ್ಲಿ ನಾವೆಲ್ಲರೂ ಶ್ರಮಿಸಬೇಕು ಎಂದರು.
ಪ್ರಾಸ್ತಾವಿಕವಾಗಿ ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಮಾತನಾಡಿ, ಶ್ರಾವಣ ಮಾಸದಾದ್ಯಂತ ಸರ್ಕಾರಿ ಶಾಲೆಗಳಿಗೆ ಕದಳಿಶ್ರೀ ವೇದಿಕೆಯವರು ಭೇಟಿ ನೀಡಿ ಮಕ್ಕಳಿಗೆ ಸಿಹಿ ವಿತರಣೆ ಮಾಡಿ, ಕಲಿಕಾ ಸಾಮಗ್ರಿಗಳನ್ನು ವಿತರಿಸುತ್ತಿರುವದು ಮಾದರಿಯಾಗಿದೆ ಎಂದರು.
ಸಹನಾ ಹಿರೇಮಠ, ಭಾರತಿ ಮಟ್ಟಿ, ರತ್ನಾ ಚಂಡೂರ, ವಿಜಯ ರಾಠೋಡ, ಅಭಿಷೇಕ ಖತಾಡೆ, ರಾಮರೂಢ ಕೆಳಗಿನಓಣಿ ಇತರರು ಇದ್ದರು.