ಜನಮೆಚ್ಚುಗೆಯ ವಿಜಯಕಾಂತ ಡೇರಿ

25GKK1b
Published on

ಗೋಕಾಕ: ಇಲ್ಲಿನ ವಿವೇಕಾನಂದ ನಗರದಲ್ಲಿ ತೆರೆಯಲಾದ ವಿಜಯಕಾಂತ ಡೇರಿ ಆ್ಯಂಡ್ ಫುಡ್ ಪ್ರಾಡಕ್ಟ್ಸ್ ಸಂಸ್ಥೆಯ ಕಿಂಗ್ ಐಸ್‌ಕ್ರೀಂ ಹಾಗೂ ಆದಿತ್ಯ ಮಿಲ್ಕ್ ನೂತನ ಮಳಿಗೆಯನ್ನು ಕಾಂಗ್ರೆಸ್ ರಾಜ್ಯ ಯುವಘಟಕದ ಪ್ರಧಾನ ಕಾರ್ಯದರ್ಶಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಹುಲ ಜಾರಕಿಹೊಳಿ ಶನಿವಾರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಹೈನುಗಾರಿಕೆ ಕ್ಷೇತ್ರದಲ್ಲಿ ಕ್ರಾಂತಿ ಮಾಡಿರುವ ಸಂಸ್ಥೆ, ಇಂದು ಕರ್ನಾಟಕ ಮಾತ್ರವಲ್ಲದೆ, ಗೋವಾ, ಮಹಾರಾಷ್ಟ್ರದಲ್ಲೂ ಉದ್ಯೋಗ ಸೃಷ್ಟಿಸಿ ಕೃಷಿ ಕುಟುಂಬಗಳಿಗೆ ಆಸರೆಯಾಗುತ್ತಿದೆ. ಗುಣಮಟ್ಟ ಕಾಯ್ದುಕೊಂಡು ಜನ ಮೆಚ್ಚುಗೆ ಪಡೆದುಕೊಂಡಿದೆ ಎಂದರು.

ಸಂಸ್ಥೆ ಉಪಾಧ್ಯಕ್ಷ ವಿಜಯಕಾಂತ ಸಿದ್ನಾಳ, ಮಾರ್ಕೇಟಿಂಗ್ ವಿಭಾಗ ಮುಖ್ಯಸ್ಥ ಹರೀಶ ಬಾಬು, ವ್ಯವಸ್ಥಾಪಕ ರವೀಂದ್ರ ಜನಗೌಡ, ರಫೀಕ್, ಸುರೇಶ ನಾಯಕ, ಅಮೂಲ ಚವ್ಹಾಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net