ಕೋಟ ಅಮೃತೇಶ್ವರಿ ದೇಗುಲದಲ್ಲಿ ವಿಜಯದಶಮಿ ವೈಭವ

KOTA (1)
Published on

ಕೋಟ: ಕೋಟದ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇಗುಲದಲ್ಲಿ ವಾರ್ಷಿಕ ಶರನ್ನವರಾತ್ರಿ ಉತ್ಸವದ ವಿಜಯದಶಮಿ ಅಂಗವಾಗಿ ಚಂಡಿಕಾ ಸಪ್ತಶತಿ ಪಾರಾಯಣ, ದುರ್ಗಾಹೋಮ ನಡೆಯಿತು.

ಸೇವಾಕರ್ತರಾಗಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ್ ಸಿ.ಕುಂದರ್ ದಂಪತಿ ಭಾಗಿಯಾಗಿದರು. ಮಧುಸೂದನ ಬಾಯರಿ ನೇತೃತ್ವದಲ್ಲಿ ಧಾಮಿಕ ವಿಧಿವಿಧಾನ ನಡೆಯಿತು.

ಪ್ರಶಾಂತ್ ಕುಂದರ್ ದಂಪತಿ, ರಕ್ಷಿತ್ ಕುಂದರ್ ದಂಪತಿ, ದೇಗುಲ ಆಡಳಿತಾಧಿಕಾರಿ ಪ್ರಶಾಂತ್‌ಕುವಾರ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಗಣೇಶ್ ನೆಲ್ಲಿಬೆಟ್ಟು, ಸುಧಾ ಎ.ಪೂಜಾರಿ, ಜ್ಯೋತಿ ಡಿ.ಕಾಂಚನ್, ಶಿವ ಪೂಜಾರಿ, ರತನ್ ಐತಾಳ್, ಚಂದ್ರ ಆಚಾರ್, ಸುಬ್ರಾಯ ಜೋಗಿ, ವಾಜಿ ಟ್ರಸ್ಟಿಗಳಾದ ಚಂದ್ರ ಪೂಜಾರಿ, ದೇಗುಲ ವ್ಯವಸ್ಥಾಪಕ ಗಣೇಶ್ ಹೊಳ್ಳ, ಅರ್ಚಕರು ಉಪಸ್ಥಿತರಿದ್ದರು.

ಸಾವಿರಾರು ಭಕ್ತರು ಭಾಗಿ

ವಿಜಯದಶಮಿ ಅಂಗವಾಗಿ ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಮಹಾಅನ್ನಸಂತರ್ಪಣೆ ಸ್ವೀಕರಿಸಿದರು. ಅಮೃತ ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net