ಅಧ್ಯಕ್ಷರಾಗಿ ವಿಜಯ ವಿ.ಕೋಟ್ಯಾನ್ ಅಲ್ಲಿಪಾದೆ ಆಯ್ಕೆ

Btw_Vijay Kotian
Published on

ಬಂಟ್ವಾಳ: ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷರಾಗಿ ವಿಜಯ ವಿ.ಕೋಟ್ಯಾನ್ ಅಲ್ಲಿಪಾದೆ ಆಯ್ಕೆಯಾಗಿದ್ದಾರೆ. ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಜಾತ್ರಾ ಮಹೋತ್ಸವ ಸಮಿತಿ ರಚಿಸಲಾಯಿತು.

ಗೌರವಾಧ್ಯಕ್ಷರಾಗಿ ರಾಧಾಕೃಷ್ಣ ಮಯ್ಯ ಕೈಯೊಟ್ಟು, ಉಪಾಧ್ಯಕ್ಷರಾಗಿ ಲೋಕೇಶ್ ಪೂಜಾರಿ ಕೆಲ್ಲೇರಿಮಾರ್, ಮಹೇಶ್ ಗೌಡ ಕೊಪ್ಪಲ, ಕಾರ್ಯದರ್ಶಿ ರಾಧಾಕೃಷ್ಣ ರೈ ಕೊಟ್ಟುಂಜ, ಜತೆ ಕಾರ್ಯದರ್ಶಿ ಚೇತನ್ ಅಮೀನ್ ಬಜ, ಕೋಶಾಧಿಕಾರಿ ನರಸಿಂಹ ಮಯ್ಯ ಗುಡ್ಡೆಮನೆ, ಗೌರವ ಸಲಹೆಗಾರರಾಗಿ ನರಸಿಂಹ ಐತಾಳ್ ಅರಮನೆ, ಸಂಜೀವ ಪೂಜಾರಿ ಕಟ್ಟದಡೆ, ಕುಸುಮಾಕರ ಶೆಟ್ಟಿ ಕುರ್ಯಾಳ, ವಿಜಯಕೃಷ್ಣ ಐತಾಳ್ ಪುಂಜೂರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net