

ಹುನಗುಂದ: ಪಟ್ಟಣದ ವಿಜಯ ಮಹಾಂತೇಶ ಸಹಕಾರಿ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ 282.24 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ರವಿ ಹುಚನೂರ ಹೇಳಿದರು.
ಪಟ್ಟಣದ ವಿಜಯ ಮಹಾಂತೇಶ ಸಹಕಾರಿ ಬ್ಯಾಂಕಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸದ್ಯಕ್ಕೆ ಬ್ಯಾಂಕ್ 61,815.69 ಲಕ್ಷ ರೂ. ದುಡಿಯುವ ಬಂಡವಾಳ, 2,783.44 ಲಕ್ಷ ರೂ. ನಿಧಿ ಹೊಂದಿದೆ.
56,470.83 ಲಕ್ಷ ರೂ. ಠೇವಣಿ ಹೊಂದಿರುವ ಬ್ಯಾಂಕ್‌ನಿಂದ 40, 998.01 ಲಕ್ಷ ರೂ. ಮುಂಗಡ ಸಾಲ ನೀಡಲಾಗಿದೆ. 33,089 ಸದಸ್ಯರು ಇದ್ದಾರೆ.
ಇದನ್ನೂ ಓದಿ: ನೇಕಾರರಿಂದ ಪತ್ರ ಚಳವಳಿ
ಬ್ಯಾಂಕ್ ಆರಂಭಗೊಂಡು 62 ವರ್ಷಗಳಾಗಿದ್ದು, ಎಲ್ಲ 11 ಶಾಖೆಗಳು ಸಂಪೂರ್ಣ ಗಣಕೀಕೃತಗೊಂಡಿವೆ ಎಂದು ಮಾಹಿತಿ ನೀಡಿದರು.
ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಕೆ.ಎಸ್.ಆಲದಿ ಮಾತನಾಡಿ, ಆ.26 ರಂದು ಬೆಳಗ್ಗೆ 11 ಗಂಟೆಗೆ ಹಳೇ ತಹಸೀಲ್ದಾರ್ ಕಚೇರಿ ಹತ್ತಿರದ ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ ವಾರ್ಷಿಕ ಮಹಾಸಭೆ ನಡೆಯಲಿದೆ ಎಂದು ಹೇಳಿದರು.
ಬ್ಯಾಂಕ್ ಉಪಾಧ್ಯಕ್ಷ ದೇವು ಡಂಬಳ, ನಿರ್ದೇಶಕರಾದ ಶಶಿಕಾಂತ ಪಾಟೀಲ, ಬಸವರಾಜ ನಾಡಗೌಡ, ಅನ್ನಪೂರ್ಣ ಹೊಸೂರ, ಮಂಜುನಾಥ ಅಲೂರು, ನೀಲಪ್ಪ ತೇಲಿ, ಮಲ್ಲು ವೀರಾಪೂರ, ಮಹಾಂತೇಶ ಅವಾರಿ, ಸಂಗಣ್ಣ ಕಡಪಟ್ಟಿ, ರಾಜಕುಮಾರ ಬಾದವಾಡಗಿ, ಬಿ.ವಿ.ಪಾಟೀಲ, ಶಿವಾನಂದ ಕಂಠಿ, ಸೋಮಶೇಖರ ಬಲಕುಂದಿ, ಎಸ್.ಎಸ್.ಗಂಜಿಹಾಳ, ಲಕ್ಷ್ಮೀಬಾಯಿ ಮುಕ್ಕಣ್ಣವರ, ಸುಜಾತಾ ನಾಗರಾಳ, ತಿರುಪತಿ ಕುಷ್ಟಗಿ, ಬಸವರಾಜ ಗದ್ದಿ, ಉಪ ಪ್ರಧಾನ ವ್ಯವಸ್ಥಾಪಕ ಜಗದೀಶ ಪಾಟೀಲ ಇದ್ದರು.